•••••ನಾಡಪ್ರಭು - TopicsExpress



          

•••••ನಾಡಪ್ರಭು ಕೆಂಪೇಗೌಡರ ಸೊಸೆ•••••!!!! ಬೆಂಗಳೂರು ಕಟ್ಟಿದ ಕೆಂಪೇಗೌಡರು ಯಾರಿಗೆ ತಾನೇ ಗೊತ್ತಿಲ್ಲಾ...!! ಆದರೆ ಇದೇ ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಕೋಟೆಗಾಗಿ ತನ್ನನ್ನು ತಾನೇ ಬಲಿ ಕೊಟ್ಟುಕೊಂಡ ತುಂಬು ಗರ್ಭಿಣಿ ಲಕ್ಷ್ಮೀದೇವಿ (ಕೆಂಪೇಗೌಡರ ಸೊಸೆ) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವವರಿಗೆ ಬಿಡಿ., ಇಲ್ಲೇ ಹುಟ್ಟಿ ಬೆಳೆದ ನಮಗೇ ಗೊತ್ತಿಲ್ಲಾ....!!! ಲಕ್ಷ್ಮೀದೇವಮ್ಮನವರ ಸ್ಮಾರಕ ಹಾಗು ದೇವಸ್ಥಾನ ಕೋರಮಂಗಲದ ಮಹಾನಗರ ಪಾಲಿಕೆಯ park ಒಂದರಲ್ಲಿದೆ... ಅಂಗೈ ಅಗಲ ಜಾಗವನ್ನೂ ಬಿಡದೇ ಅತಿಕ್ರಮಣ ಮಾಡಿಕೊಳ್ಳುವ., ಮೋರಿಗಳ ಮೇಲೂ ಮನೆ ಕಟ್ಟಿಕೊಳ್ಳುವ ಇಂದಿನ ಬೆಂಗಳೂರಿನಲ್ಲಿ., ಹಿಂದೊಮ್ಮೆ ಜನರ ಒಳಿತಿಗೋಸ್ಕರ ಪ್ರಾಣತ್ಯಾಗ ಮಾಡಿದವರ ಇತಿಹಾಸವೂ ಇದೆ ಎಂದು ತಿಳಿದು ಹೆಮ್ಮಯಾಗುತ್ತದೆ... ಸರ್ಕಾರದವರು 2015ನೇ ವರ್ಷದಿಂದ ಇವರ ಹೆಸರಿನಲ್ಲಿ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹತ್ತು ಹೆಣ್ಣು ಮಕ್ಕಳಿಗೆ ಪ್ರಶಸ್ತಿ ಕೊಡುವುದಾಗಿ ಘೋಷಿಸಿದೆ...ಲಕ್ಷ್ಮಮ್ಮನವರ ಬಲಿದಾನಕ್ಕೆ ಇನ್ನೂ ಹೆಚ್ಚಿನ ಮನ್ನಣೆ ಸಿಗಬೇಕಿತ್ತೇನೋ....!!! ಯಾವುದೋ ದೂರದೇಶದ ಇತಿಹಾಸ ತಿಳಿಯಲು ಆಸಕ್ತಿ ವಹಿಸುವ ನಾವು ನಮ್ಮದೇ ನೆಲದಲ್ಲಿ ಇತಿಹಾಸ ನಿರ್ಮಿಸಿದ ಎಷ್ಟೋ ಶ್ರೇಷ್ಠರ ಬಗ್ಗೆ ತಿಳಿಯದಿರುವುದು ವಿಪರ್ಯಾಸ....!!! Leave alone people landing in KEMPEGOWDA INTERNATIONAL AIRPORT.,even we localites are unaware of the same Kempegowdas pregnant daughter in law LAKSHMIDEVI.,who sacrificed her life for the construction of bangalore fort...!!! The irony lies in the fact that we take much keen interest in learning about world famous legendaries., ignoring ••LEGENDS•• who have made our land WORLD FAMOUS....!!
Posted on: Sun, 14 Sep 2014 12:59:24 +0000

Trending Topics



Recently Viewed Topics




© 2015