"ಭಾಗ್ಯದಾ ಲಕ್ಷ್ಮೀ - TopicsExpress



          

"ಭಾಗ್ಯದಾ ಲಕ್ಷ್ಮೀ ಬಾರಮ್ಮಾ..... ’ಕನಕವೃಷ್ಟಿಯ ಕರೆಯುತ ಬಾರೆ|ಮನಕೆ ’ಮಾನವ ಸಿದ್ಧಿ’ಯ ತೋರೆ....’ ಹೀಗೆಂದಿದ್ದಾರಂತೆ ಪುರಂದರ ದಾಸರು. ಎಲ್ಲರೆಲ್ಲರಿಗೆ ಚಿರಪರಿಚಿತವಿರುವ ಲಕ್ಷ್ಮೀ ಹಾಡು, ಇದು. ಆದರೆ ಆ ’ಮಾನವ ಸಿದ್ಧಿ’ ಯಾವುದು? ವಿದ್ಯಾಪ್ರಸನ್ನತೀರ್ಥರು ಹೇಳುತ್ತಾರೆ: ’ಈಶನಂಘ್ರಿಯಲಿ ಬಕುತಿಯನು...ಹರಿ- ದಾಸರ ದಾಸ್ಯದಿ ಶಕುತಿಯನು ಮೋಸಕೆ ಸಿಗದ ವಿರಕ್ತಿಯನು.....ಕರುಣದಿ ನೀಡೇ ಪ್ರಸನ್ನೆ..... ’ಮೋಸಕೆ ಸಿಗದ ವಿರಕ್ತಿ’ ಇದೆಯಲ್ಲಾ, ಅದೇ ಐನಾತಿ ವಿಚಾರ. ನಿಗ್ರಹಶಕ್ತಿಯಾಗಿ ಲಭಿಸಿದರೆ ಮಾತ್ರಾ, ’ಲಕ್ಷ್ಮೀ ಕುಮಾರರು’ ಉದ್ಧಾರವಗುವುದು. ಇಲ್ಲದಿದ್ದರೆ ಸರ್ವನಾಶ ಕಟ್ಟಿಟ್ಟ ಬುತ್ತಿ. ಹಣ ಡಬಲ್‌ ಮಾಡಿಕೊಡುವ ದೈವ ಪುರುಷರ ಕೈಗೆ ಬಂಗಾರದ ನಾಣ್ಯಗಳನ್ನು ಕೊಟ್ಟು ಪೆಚ್ಚಾಗುವುದು, ಸರಗಳ್ಳರಿದದಾರೆಂಬ ಬೆದರಿಕೆ ಮತಿಗೆ ಪಕ್ಕಾಗಿ ಇದ್ದಬದ್ದದ್ದನ್ನೆಲ್ಲಾ ಕೈಯಾರೆ ಕಳ್ಳರ ಕೈಗೊಪ್ಪಿಸಿ ಬಾಯಿ ಬಡಿದುಕೊಳ್ಳುವುದು ಇತ್ಯಾದಿ ಸುದ್ದಿಗಳೇನು ಕಡಿಮೆಯೇ? ಇನ್ನೂ ಬೇಕು; ಮತ್ತೂ ಬೇಕು; ಒಂಚೂರೂ ಆಚೆ ಹೋಗಬಾರದು.... ಇದು ಲಕ್ಷ್ಮೀದೇವಿಯನ್ನು ಆರಾಧಿಸುವ ಪರಿಯಲ್ಲ. ’ಅರ್ಥಮನರ್ಥಂ ಭಾವಯೆ ನಿತ್ಯಂ| ನಾಸ್ತಿತದಸ್ಸುಖ ಲೇಶಃ ಸರ್ವಂ...’ ಶಂಕರ ಭಗವತ್ಪಾದರು ಹೀಗಂದಿರುವುದು ಲಕ್ಷ್ಮಿಯನ್ನೇ ತಿರಸ್ಕರಿಸಬೇಕೆಂದಲ್ಲ. ಜಡತೆ ಅಲಕ್ಷ್ಮಿ. ಅದನ್ನು ಬಿಟ್ಟು ಪಟುತ್ವದಿಂದ ಬದುಕಬೇಕು. ಕೈಗೆ ಕಾಸು ಬುರುತ್ತದೆ. ಅದನ್ನು ವಿಹಿತವಾಗಿ ತೊಡಗಿಸಿ ಅದರ ಚಲಾವಣೆಯ ಜಿವಂತಿಕೆಯನ್ನು ಕಾಪಾಡಿಕೊಳ್ಳಬೇಕು. Excess ಖಂಡಿತಾ ಬರುತ್ತದೆ ಅದು ದೀನಜನರಿಗೆ ದೇಯವಗತಕ್ಕದ್ದು. ಲಕ್ಷ್ಮೀ ನಮಗೆ ಧಾರಾಳವಾಗಿ ಕೊಡಲಿ; ಜತೆಗೆ ಅಷ್ಟೇ ಧರಾಳವಾಗಿ ಕೊಡುವ ಮನೋಭಾವವನ್ನೂ ನಮಗೆ ಕೊಡಲಿ. ’ಭಾಗ್ಯದಾ ಲಕ್ಷ್ಮೀ ಬಾರಮ್ಮಾ; ಬರುತ್ತಾ-ಹೋಗುತ್ತಾ ನಮ್ಮನ್ನೂ, ಸುತ್ತ-ಮುತ್ತಣವರನ್ನೂ ಜೀವಂತಿಕೆಯಿಂದಿರಿಸಮ್ಮಾ.....
Posted on: Fri, 16 Aug 2013 07:09:00 +0000

Trending Topics



Recently Viewed Topics




© 2015