••••ಮಳೆ,ಮೋರಿ ನೀರೂ COURT - TopicsExpress



          

••••ಮಳೆ,ಮೋರಿ ನೀರೂ COURT ನಲ್ಲಿ ನ್ಯಾಯ ಕೇಳಿದರೆ ಅಪರಾಧಿ ಯಾರು...???•••• ಬೆಂಗಳೂರಿನಲ್ಲಿ ಧಾರಾಕಾರ ಮಳೆ.,ರಸ್ತೆಯಲ್ಲಿ ವಾಹನಗಳು ಮುಳುಗಡೆ ಪ್ರಯಾಣಿಕರ ಪರದಾಟ.,ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿದ ನೀರು,ಮನೆಯವರ ಹೆಣಗಾಟ ಮನುಷ್ಯನಿಗಾಗುವ ಅನಾನುಕೂಲಗಳ ಬಗ್ಗೆ ಎಷ್ಟೆಲ್ಲಾ ಮಾತನಾಡುವ ನಾವುಗಳು ••ಮನುಷ್ಯನೇ••ಅದಕ್ಕೆ ಮೂಲ ಕಾರಣ ಎನ್ನುವುದನ್ನ ಮರೆತೇ ಬಿಡುತ್ತೇವೆ....!!! 20 ವರ್ಷಗಳ ಹಿಂದೆ 200ಕ್ಕೂ ಹೆಚ್ಚಿದ್ದ ಬೆಂಗಳೂರಿನ ಕೆರೆಗಳು ಇಂದು ಕೇವಲ 50...!! ಸರ್ಕಾರ ಅರ್ಧ ಕೆರೆಗಳನ್ನು ಮುಚ್ಚಿ ಮಾರಿದರೆ., ಭೂಗಳ್ಳರ ಕರಾಮತ್ತಿನಿಂದ ಮಿಕ್ಕ ಕೆರೆಗಳು ಸತ್ತು ಹೋಗಿವೆ.. ಸರಿಸುಮಾರು 25ಸಾವಿರ ಕೋಟಿ ಬೆಲೆಯಷ್ಟು ಕೆರೆ ಭೂಮಿಯನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ.. ಮೋರಿಯ ಪಕ್ಕ ನಿವೇಶನ ಸಿಕ್ಕರೆ ಮೂರಡಿ ಜಾಗ ಹೆಚ್ಚು ಸಿಕ್ಕಿತು ಎಂದು ಖುಷಿಯಿಂದ ಒತ್ತುವರಿ ಮಾಡಿಕೊಳ್ಳುವ ನಾಗರೀಕರು...!! ರಾಜಕಾಲುವೆಗಳ ಸುಳಿವೂ ಇಲ್ಲದೆ ತಲೆಯೆತ್ತಿರುವ ವಾಣಿಜ್ಯ ಸಂಕೀರ್ಣಗಳು....!! ಮಳೆ ನೀರು ಎಲ್ಲಿ ಹೋಗಬೇಕು?? ನೀರಿಗೂ ನ್ಯಾಯ ಬೇಡವೇ???? •• WHO IS THE REAL CULPRIT.,MAN OR RAIN..??•• We worry so much about the chaos created by rains in our town forgetting the real reason behind it.. water flooded on roads,underpasses, residential areas.,but little do we know that most of those regions were originally lakes...!! Some lakes are legally closed and sold., Nearly 25k crores worth lakes have been encroached.. RAIN is a helpless victim.,while MAN is the real culprit....!!!!
Posted on: Fri, 26 Sep 2014 04:30:54 +0000

Trending Topics



Recently Viewed Topics




© 2015