Fourth phase of Assembly Elections: Voting for 18 J&K seats, 15 - TopicsExpress



          

Fourth phase of Assembly Elections: Voting for 18 J&K seats, 15 Jharkhand constituencies begins ಜಮ್ಮು ಕಾಶ್ಮೀರ ಮತ್ತು ಜಾರ್ಖಂಡ್ನಲ್ಲಿ ನಾಲ್ಕನೇ ಹಂತದ ಮತದಾನ ಆರಂಭಗೊಂಡಿದೆ. ಜಮ್ಮು ಕಾಶ್ಮೀರದಲ್ಲಿ 18 ಕ್ಷೇತ್ರಗಳು ಮತದಾನ ಎದುರಿಸ್ತಿದ್ದು, 182 ಮಂದಿ ಕಣದಲ್ಲಿದ್ದಾರೆ. ಶ್ರೀನಗರ, ಅನಂತ್ನಾಗ್, ಕಣಿವೆ ಭಾಗದ ಶೋಪಿಯಾನ್ ಹಾಗೂ ಜಮ್ಮು ಭಾಗದ ಸಾಂಬಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಚುನಾವಣೆ ನಡೆಯಲಿದ್ದು, 1890 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಿಎಂ ಒಮರ್ ಅಬ್ದುಲ್ಲಾ ಶ್ರೀನಗರದ ಸೋನ್ವಾರ್ ಕ್ಷೇತ್ರದಲ್ಲಿ ಸ್ಪರ್ಧಿಸ್ತಿದಾರೆ. ಇನ್ನು ಪಿಡಿಪಿಯ ಮೆಹಮೂದ್ ಮುಫ್ತಿ ಅನಂತ್ನಾಗ್ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ. ಒಮರ್ ಅಬ್ದುಲ್ಲಾ ಎರಡು ಕಡೆ ಸ್ಪರ್ಧಿಸ್ತಿದ್ದು, ಬುದ್ಗಾಮ್ ಜಿಲ್ಲೆಯ ಬೀರ್ವಾ ಕ್ಷೇತ್ರದಲ್ಲಿ ಮೂರನೇ ಹಂತದಲ್ಲಿ ಚುನಾವಣೆ ಎದುರಿಸಿದ್ದರು. ಇನ್ನು ಜಾರ್ಖಂಡಿನ 15 ಕ್ಷೇತ್ರಗಳಲ್ಲಿ 217 ಮಂದಿ ಕಣದಲ್ಲಿದ್ದು, ಸಿಎಂ ಬಾಬುಲಾಲ್ ಮರಾಂಡಿ ಸೇರಿದಂತೆ ಮೂವರು ಕ್ಯಾಬಿನೆಟ್ ಸಚಿವರು ಮತದಾನ ಎದುರಿಸ್ತಿದಾರೆ. ಎರಡೂ ರಾಜ್ಯಗಳಲ್ಲಿ ಈಗಾಗ್ಲೇ ಮತದಾನ ಆರಂಭಗೊಂಡಿದ್ದು, ಬೆಳಗ್ಗಿನಿಂದಲೇ ಜನ ಮತಗಟ್ಟೆಯಲ್ಲಿ ಸಾಲು ನಿಂತಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರೋ ಪ್ರಧಾನಿ ನರೇಂದ್ರ ಮೋದಿ, ಅತಿ ಹೆಚ್ಚು ಮಂದಿ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸುವಂತೆ ಎರಡೂ ರಾಜ್ಯಗಳ ಮತ ಬಾಂಧವರಲ್ಲಿ ಮನವಿ ಮಾಡೋದಾಗಿ ಹೇಳಿದ್ದಾರೆ.
Posted on: Sun, 14 Dec 2014 10:01:51 +0000

Trending Topics



Recently Viewed Topics




© 2015