Public Interest Litigation** (PIL) - - TopicsExpress



          

Public Interest Litigation** (PIL) - ಅಂಬರೀಶ ಬೆಂಗಳೂರಿನ ಕೆಂಪಾಂಬೂದಿ ಕೆರೆ ಜಾಗದಲ್ಲಿ ಕ್ಯಾಸಿನೋ ಜೂಜು ಕ್ಲಬ್ ಕಟ್ಟಲು ಹೊರಡುವ ರಿಯಲ್ ಎಸ್ಟೇಟ್ ಮಾಫಿಯಾ ದಂಧೆಯ ಮುಖಪರಿಚಯ ಮಾಡುವುದರಿಂದ ಆರಂಭವಾಗುವ ಕಥೆ, ಒತ್ತುವರಿಯಾಗಿರುವ ಬೆಂಗಳೂರಿನ ಸರ್ಕಾರಿ ಜಾಗಗಳನ್ನ ವಶಪಡಿಸಿಕೊಳ್ಳುವ ಮತ್ತು ಕಾನೂನೂ ಬಾಹಿರ ಕಟ್ಟಡಗಳನ್ನು ಉರುಳಿಸುವದರೊಂದಿಗೆ ರಿಯಲ್ ಎಸ್ಟೇಟ್ ಮಾಫಿಯಾದ ಸದ್ಧಡಗಿಸುವ ನಾಯಕನ ಹೋರಾಟ ಸುಖಾಂತ ಕಾಣುತ್ತದೆ..! ಸಾಮಾನ್ಯ ಮನುಷ್ಯನೊಬ್ಬ ರಿಯಲ್ ಎಸ್ಟೇಟ್ ಡಾನ್ ವಿರುದ್ಧ ತೊಡೆತಟ್ಟಿ ನಿಂತಾಗ ಜುಮ್ಮೆನಿಸಬೇಕಿದ್ದ ಚಿತ್ರಕಥೆಯ ದೃಶ್ಯಗಳು ಪೇಲವ ಅನ್ನಿಸ್ತು..! (ಗೋವಾ ಸಮುದ್ರದಲ್ಲಿ ಮತ್ತು ಸಿಕ್ಕಿಂ ಹೊರತುಪಡಿಸಿ ಭಾರತದಲ್ಲಿ ಕ್ಯಾಸಿನೋ ಜೂಜಾಟಕ್ಕೆ ಕಾನೂನಿನ ಅನುಮತಿ ಇಲ್ಲ) ಕ್ಯಾಸಿನೋ ಜೂಜು ಮತ್ತು ರಿಯಲ್ ಎಸ್ಟೇಟ್ ಮಾಫಿಯಾ ಸಮಸ್ಯೆಯ ಕುರಿತು ಆಳವಾಗಿ ಹೋಗದೇ, protagonist ಗುರಿ ಮತ್ತು ಉದ್ದೇಶವನ್ನು build-up ಗಳಲ್ಲಿ ತೇಲಿಸಿಕೊಂಡು ಹೋಗಿರುವುದರಿಂದ ನಿರೂಪಣೆಯ ವೇಗ ಅತ್ತಿಂದಿತ್ತ ತುಯ್ದಾಡಿಕೊಂಡಿದೆ..! ಬುಲ್ಲೆಟ್ ಪ್ರಕಾಶ್ ಮತ್ತು ಸಾಧುಕೋಕಿಲ ಅವರ monotonous ಹಾಸ್ಯಾ(ಸ್ಪದ) ದೃಶ್ಯಗಳು ಸಹಜವಾಗಿ ನಗಿಸೋಲ್ಲವಾದರೂ ನಗುವುದು ಪ್ರೇಕ್ಷಕರ ಪರಧರ್ಮ.. ಒಂದಷ್ಟು ದೃಶ್ಯಗಳು ಹಾಗು ಮೂರು ಹಾಡುಗಳು ವಾವ್ ಅನ್ನೋ ಅಷ್ಟು ಶ್ರೀಮಂತವಾಗಿ ತೆರೆಯ ಮೇಲೆ ಮೂಡಿಬಂದಿವೆ..! ರಚಿತಾ ರಾಮ್ ಎಂದಿನಂತೆ ಮುದ್ದಾಗಿದ್ದಾರೆ, ಮುದ್ದ್ ಮುದ್ದಾಗ್ ನಗ್ತಾರೆ..! ಡಾನ್ ಬಿರುದಾಂಕಿತ ಕೆಲ್ಲಿ ದೋರ್ಜೆ as usual ಪ್ಲಾಸ್ಟಿಕ್ expressions, ಶರತ್ ಲೋಹಿತಾಶ್ವ ತಮ್ಮ ಪಾತ್ರಕ್ಕೆ ಅವಶ್ಯಕವಾದಷ್ಟು ಜೀವ ತುಂಬಿ ಜೈ ಅಂದಿದ್ದಾರೆ..! ದರ್ಶನ್ ಮಾಸ್ ಇಮೇಜು, ಹೆಣ್ಣು-ಹೊನ್ನು-ಮಣ್ಣು-ನಾಡು-ನುಡಿ-ಸಂಸ್ಕೃತಿಗಳ ಪಂಚಿಂಗ್ ಸಂಭಾಷಣೆಗಳು, Social Cause, ರವಿವರ್ಮಾರ ಸಕ್ಕತ್ ಫೈಟುಗಳು, ಹರಿಕೃಷ್ಣರ ಹಿನ್ನೆಲೆ ಸಂಗೀತ ಮತ್ತು ಹಾಡುಗಳು, ಅಂಬರೀಶಣ್ಣನ ಕೆಂಪೇಗೌಡರ ದರ್ಬಾರ್, ಪ್ರಿಯಾಮಣಿಯ ಹಾಟ್ ಹಾಟ್ ಸೊಂಟ ಬಳುಕಿಸೋ ಅಸಕ್ಕು ಲಸಕ್ಕು ಹಾಡಿಗಾಗಿ ಮತ್ತು ದರ್ಶನ್ ಅವರ ಅಭಿಮಾನಿಗಳು ಅಣ್ಣನ ಮೇಲಿನ ಅಭಿಮಾನಕ್ಕಾಗಿ ಒಂದ್ಸಲ ಸಿನಿಮಾ ನೋಡಿದರೆ ಲಾಸ್ ಇಲ್ಲ..! ಮಿಕ್ಕಂತೆ ಬಾಕ್ಸ್ ಆಫೀಸ್ ಜವಾಬ್ದಾರಿ ಪ್ರೇಕ್ಷಕನದ್ದು...!
Posted on: Thu, 20 Nov 2014 09:36:30 +0000

Trending Topics



Recently Viewed Topics




© 2015