Shimoga Company Made Fraud To Public 50ಕ್ಕೆ - TopicsExpress



          

Shimoga Company Made Fraud To Public 50ಕ್ಕೆ ನೂರು, ನೂರಕ್ಕೆ ಇನ್ನೂರು ನಿಮ್ಮ ಹಣ ಡಬಲ್ ಮಾಡಿಕೊಡ್ತೀವೆಂದು ಬ್ಲೇಡ್ ಕಂಪನಿಯೊಂದು ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರೋ ಪ್ರಕರಣ ಶಿವಮೊಗ್ಗದಲ್ಲಿ ನಡೆದಿದೆ. 2010ರಲ್ಲಿ ನಗರ ಗೋಪಿ ವೃತ್ತದಲ್ಲಿ ಮೈತ್ರಿ ಪ್ಲಾಂಟೇಷನ್ ಮತ್ತು ಹಾರ್ಟಿಕಲ್ಚರ್ ಹೆಸರಿನ ಕಂಪನಿ ತಲೆ ಎತ್ಕೊಂಡಿತ್ತು. ಕಂಪನಿಯ ಚೇರಮನ್ ಮತ್ತು ಎಂಡಿ ಎಲ್.ಮಹಾದೇವ್ ರೆಡ್ಡಿ ಎಂಬುವರು, ಶಿವಮೊಗ್ಗ ಬ್ರ್ಯಾಂಚ್ ಗೆ ಲೋಕೇಶ್ ಎಂಬಾತನನ್ನ ನೇಮಿಸಿದ್ರು. ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತಲೂ ಹೆಚ್ಚಿನ ಬಡ್ಡಿ ನೀಡ್ತೇವೆ ಅಂತಾ ಆಮಿಷ ತೋರಿಸಿದ್ರಿಂದಾಗಿ, ಕೂಲಿಯವರಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಿಗಳೂ ಕಂಪನಿಯಲ್ಲಿ ಹಣ ಹೂಡಿದ್ರು. ಸುಮಾರು 10 ಲಕ್ಷದವರೆಗೂ ಇದೇ ಕಂಪನಿಯಲ್ಲಿ ಹಣ ಹೂಡಿದ್ರು. ಪ್ರತಿ ತಾಲೂಕಿನಲ್ಲಿ ಇರೋ ಏಜೆಂಟ್ ರುಗಳು ಹಣವನ್ನ ಕಟ್ಟಿಸಿಕೊಳ್ತಿದ್ರು. ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಸಾವಿರಾರು ಜನರ ಸುಮಾರು 3ಕಿಂದ 4 ಕೋಟಿ ರೂಪಾಯಿ ಹಣವನ್ನ ಕಟ್ಟಿಸಿಕೊಂಡ ಕಂಪನಿಯ ಅಧಿಕಾರಿಗಳೇ ಈಗ ಕಾಣ್ತಿಲ್ಲ. ಶಿವಮೊಗ್ಗದಲ್ಲಿದ್ದ ಕಚೇರಿಯ ಬಾಗಿಲಿಗೆ ಬೀಗ ಬಿದ್ದಿದೆ. ಇದಿಷ್ಟೇ ಅಲ್ಲ, ರಾಜ್ಯಾದ್ಯಂತ ಇದೇ ಕಂಪನಿ ಸುಮಾರು 150 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ಈಗ ಇದೇ ಬ್ಲೇಡ್ ಕಂಪನಿಯ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಹಣ ಕಳ್ಕೊಂಡವರು ಕಂಪ್ಲೇಂಟ್ ದಾಖಲಿಸಿದ್ದಾರೆ. ..... ಹಣ ಪಡೆದ ವಂಚಕರು ನಾಮ ಹಾಕಿ ಎಸ್ಕೇಪ್ ಆಗಿದ್ರೆ, ಇತ್ತ ಹಣ ಕಳ್ಕೊಂಡವರು ಖಾಲಿ ಬಾಂಡ್ ಪೇಪರ್ ಗಳನ್ನ ಕೈಯಲ್ಲಿ ಹಿಡ್ಕೊಂಡು ಬಾಯಿಬಾಯಿ ಬಡಿದುಕೊಳ್ತಿದ್ದಾರೆ.
Posted on: Thu, 18 Dec 2014 08:52:31 +0000

Trending Topics



Recently Viewed Topics




© 2015