Vasant Shetty ಬರಿತಾರೆ : - TopicsExpress



          

Vasant Shetty ಬರಿತಾರೆ : ಮೋದಿಗುರುಡು ಆವರಿಸಿರುವವರಿಗೆ ಕರ್ನಾಟಕ, ಕರ್ನಾಟಕದ ರಾಜಕೀಯ ಹಿತಾಸಕ್ತಿ ಎಲ್ಲವೂ ಎಷ್ಟು ನಗಣ್ಯ ಅನ್ನುವುದು ಕಾಣಿಸುತ್ತೆ. ಅವರ ಪ್ರಕಾರ ಕರ್ನಾಟಕದ ಹಿತಾಸಕ್ತಿಗೆ ದನಿ ಎತ್ತೋದು ಕರ್ನಾಟಕದ ಎಮ್.ಪಿಗಳ ಕೆಲಸ, ಅದಕ್ಕೆ ಮೋದಿಯನ್ನ ಕೇಳಬಾರದು. ಸರಿ, 28ರಲ್ಲಿ ಇರುವ 19 ಜನ ಬಿಜೆಪಿ ಸಂಸದರ ಸಾಧನೆ ಏನು? ಕಾವೇರಿ ಅಂತಿಮ ತೀರ್ಪಲ್ಲಿ ಸಂಸತ್ತಿನಲ್ಲಿ ಚೂರೂ ಬಾಯಿ ತೆರೆಯದೇ 2 ಕೋಟಿ ಕನ್ನಡಿಗರ ಹಿತ ಕಾಯುವ ಕೆಲಸ ಮಾಡದೇ ಇದ್ದದ್ದು ತಪ್ಪೇ ಅನ್ನಿಸಲ್ಲ. ಕರ್ನಾಟಕದ ರಸ್ತೆ, ರೈಲು ಸಂಪರ್ಕ ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಪೆತೆಟಿಕ್ ಆಗಿದೆ, ಆದರೆ ಅದರ ಬಗ್ಗೆ ಬಿಜೆಪಿ ಸಂಸದರು ಬಾಯಿ ತೆಗೆದಿಲ್ಲ ಅನ್ನುವುದು ದೊಡ್ಡ ವಿಶಯ ಅಲ್ಲ. ದೆಹಲಿಯ ಮನೆ ಹೊರಗೆ ಕನ್ನಡದಲ್ಲಿ ಬೋರ್ಡ್ ಹಾಕಿದೆ, ಕನ್ನಡದಲ್ಲೇ ಸಹಿ ಮಾಡುತ್ತೇನೆ ಅನ್ನುವ ಬಿಜೆಪಿಯ ಹಿರಿಯ ಸಂಸದರ ಮಾತೇ ಇವರು ಕನ್ನಡ, ಕನ್ನಡಿಗರಿಗೆ ಮಾಡುತ್ತಿರುವ ಅತಿ ದೊಡ್ಡ ಸೇವೆ ಅನ್ನಿಸುತ್ತೆ. ಇನ್ನೂ ಮುಂದುವರೆದು, ಕರ್ನಾಟಕದ ಬಿಜೆಪಿ ನಾಯಕರೇ ಈ ಬಾರಿಯ ಚುನಾವಣೆ ಪ್ರೆಸಿಡೆನ್ಶಿಯಲ್ ಮಾದರಿಯದ್ದು, ಸ್ಥಳೀಯ ನಾಯಕರೆಲ್ಲ ಲೆಕ್ಕಕ್ಕಿಲ್ಲ ಅನ್ನುವಂತೆ ಮಾತಾಡಿದಾಗಲೂ ಇವರಿಗೆ ಅದು ಕನ್-ಸರ್ನ್ ಆಗಿ ಕಾಣಲ್ಲ. ಅರ್ಜೆಂಟಾಗಿ ಮೋದಿ ಪಿ.ಎಮ್ ಆಗಬೇಕು, ಯಾಕೆಂದರೆ ಕಾಶ್ಮಿರದಲ್ಲಿ ಉಗ್ರರ ಕಾಟವಿದೆ, ಚೈನಾಗೆ ತಕ್ಕ ಬುದ್ದಿ ಕಲಿಸಬೇಕು, ಬಾಂಗ್ಲಾ ವಲಸಿಗರನ್ನು ವಾಪಾಸ್ ಕಳಿಸಬೇಕು. ಅವೆಲ್ಲ ಮುಖ್ಯ ವಿಶಯ ಅಲ್ಲ ಅಂತ ನಾನು ಹೇಳುತ್ತಿಲ್ಲ, ಆದರೆ ಕರ್ನಾಟಕದ ಮೋದಿ ಭಕ್ತರ ಚರ್ಚೆಯೆಲ್ಲ ಬರೀ ಈ ವಿಷಯಗಳ ಸುತ್ತಲೇ ಇವೆ. ಮೋದಿಗೆ ಮತ ಹಾಕ್ತಿವಿ, ವಾಪಸ್ ಕರ್ನಾಟಕಕ್ಕೆ ಏನೇನ್ ಕೊಡ್ತಿರಾ? ನಮ್ಮ ಹಿತಾಸಕ್ತಿ ರಕ್ಷಿಸಲು ಏನೇನ್ ಮಾಡ್ತಿರಾ? ಅಂತ ಕೇಳಬೇಕು ಅನ್ನುವ ಚಿಕ್ಕ ಪೊಲಿಟಿಕಲ್ ಅವೇರ್-ನೆಸ್ ಕೂಡ ಇವರಲ್ಲಿಲ್ಲ. ರಾಜಕೀಯವಾಗಿ ಕರ್ನಾಟಕ ಯಾಕೆ ವೀಕ್ ಇದೆ ಅಂದ್ರೆ ಕನ್ನಡಿಗರು ಎಲ್ಲದನ್ನೂ ಕನ್ನಡದ ಕಣ್ಣಿನಿಂದ ನೋಡಿ, ಭಾರತ ಅನ್ನುವ ಒಕ್ಕೂಟದಲ್ಲಿ ತಮ್ಮ ಹಿತಾಸಕ್ತಿ ಕಾಯ್ದಕೊಳ್ಳುವ ರಾಜಕೀಯ ಚಿಂತನೆ ಮಾಡದೇ ಇರೋದು. ಇದೇ ಪ್ರಶ್ನೆ ರಾಹುಲ್, ಕುಮಾರಸ್ವಾಮಿಗೆ ಯಾಕೆ ಕೇಳಲ್ಲ ಅನ್ನುವ ವಾದ ತರ್ತಾರೆ. ಅದಕ್ಕೆ ನನ್ನ ಉತ್ತರ ಇದೇ ಪ್ರಶ್ನೆಗಳು ಅವರಿಗೂ ಅನ್ವಯಿಸುತ್ತೆ. ಆದ್ರೆ ದಿನ, ರಾತ್ರಿ ನಡಿತಾ ಇರೋದು ಮೋದಿ ಭಜನೆ ಆಗಿರುವುದರಿಂದ ಈ ಪ್ರಶ್ನೆ ಮೋದಿಗೆ ಕೇಳಿದ್ದೇನೆ. ರಾಹುಲ್ ಗಾಂಧಿಯನ್ನ ಯಾರಾದ್ರೂ ಸೀರಿಯಸ್ ಆಗಿ ತಗೊಳ್ಳೊಕೆ ಆಗುತ್ತಾ? ಕುಮಾರಸ್ವಾಮಿಯವರು ಮೊದಲು ತಮ್ಮ ಪಕ್ಷದ ಸೋಶಿಯಲ್ ಇಂಜಿನಿಯರಿಂಗ್ ಸರಿ ಮಾಡಿಕೊಳ್ಳಲಿ, ಮೊದಲು ರಾಷ್ಟ್ರೀಯ ಪಕ್ಷವೋ, ಪ್ರಾದೇಶಿಕವೋ ಅನ್ನೋ ಗೊಂದಲ ಸರಿ ಮಾಡಿಕೊಳ್ಳಲಿ, ಅದಾದ ಮೇಲೆ ಅವರಿಗೆ ಪ್ರಶ್ನೆ ಕೇಳೊಣ. ನನ್ನ ಮತ ಕರ್ನಾಟಕದ ಹಿತ ಕಾಯೋರಿಗೆ. ಅದು ಮೋದಿ ಮಾಡಿದ್ರೆ ಅವರಿಗೆ ಹಾಕೋಣ. ಅದಕ್ಕೂ ಮೊದಲು Let him spell out his plans for Karnataka.
Posted on: Sun, 27 Oct 2013 16:13:28 +0000

Trending Topics



-height:30px;">
I have a prayer request…please. I am struggling with a conflict

Recently Viewed Topics




© 2015