ಆ ಸಾಮ್ರಾಜ್ಯಕ್ಕೆ - TopicsExpress



          

ಆ ಸಾಮ್ರಾಜ್ಯಕ್ಕೆ ಅವಳೊಬ್ಬಳೇ ಮಹಾರಾಣಿ. ಅವಳು ಕಪ್ಪು ಸುಂದರಿ. ಸ್ವಲ್ಪ ಅಹಂಕಾರವಿದ್ದರೂ, ಎಲ್ಲರನ್ನೂ, ಬಾಚಿ ಬಾಚಿ ತಬ್ಬಿಕೊಳ್ಳುತ್ತಿದ್ದಳು. ಅವಳಿಗಿದ್ದ ಸೇನಾಪಡೆ ಕೇವಲ ನಾಲ್ಕು ಮಾತ್ರ (valency). ಅದರಿಂದಲೇ chemical science ನಲ್ಲಿ organic chemistry ಎಂಬ ಹೊಸ ಲೋಕವನ್ನೇ ಸೃಷ್ಟಿಸಿದ್ದಳು. ನಾನಾ ಮಾರುವೇಷಗಳನ್ನು ಹಾಕುವುದರಲ್ಲಿ ಎತ್ತಿದ ಕೈ. pencil ನಲ್ಲಿ graphite ಆಗಿ, ಹೆಂಗಳೆಯರ ಮೈಮೇಲೆ ವಜ್ರವಾಗಿ, ತಲೆ ಕೆಟ್ಟರೆ ಸುಟ್ಟ ಬೂದಿಯಲ್ಲೂ ಕಾಣುತ್ತಿತ್ತು ಅವಳ ನಗು. ಅವಳ ನಗೆಯೇ ಅಟ್ಟಹಾಸವಾಗಿ ಹೊರಹೊಮ್ಮಿದ್ದು ಒಂದು ವಿಚಿತ್ರ ಕಥೆ. 18 ನೆ ಶತಮಾನ ಆರಂಬವಾಗಿತ್ತಷ್ಟೆ, ಅಲ್ಲಿಯವರೆಗೆ organic chemistry ಗಿದ್ದ definition ಕೂಡ ಸೀಮಿತ. Jons Jakob Berzelius ಕೂಡ "organic compounds could only be made by living things" ಅಂತ ಷರಾ ಬರೆದುಬಿಟ್ಟಿದ್ದ. ಯಾವಾಗ Berzelius ಶಿಷ್ಯನಾದ Friedrich Wohler ಒಂದು Inorganic compound ಆದ Ammonium cyanate ನಿಂದ Organic compound ಆದ Urea ಅನ್ನು synthesize ಮಾಡಿದನೋ, chemist ಗಳೆಲ್ಲ, ತಲೆ ಕೆರೆದುಕೊಳ್ಳುವಂತಾಯಿತು.Organic chemistry ಗೆ ಒಂದು ಹೊಸ definition ಹುಡುಕಲೇಬೇಕಾದ ಅನಿವಾರ್ಯತೆ ಒದಗಿಬಂದಿತ್ತು. Chemist ಗಳೆಲ್ಲಾ ಒಂದೆಡೆ ಸೇರಿಕೊಂಡು periodic table ಅನ್ನು ಹಿಡಿದುಕೊಂಡು ಕುಂತರು. sodium ತನ್ನ electron ಯಾರಾದರೂ ಕದ್ದರೆಂಬ ಭಯದಿಂದ ಅಡಗಿ ಕುಳಿತಿತ್ತು. ಒಂದೇ ಮನೆಯಲ್ಲಿದ್ದ hydrogen, deuterium ಮತ್ತು tritium ಗಳು ತಮ್ಮ ಸ್ವಂತ ಮನೆಯಲ್ಲೇ ಹತೋಟಿ ಸ್ತಾಪಿಸುವಲ್ಲಿ ಹೆಣಗುತ್ತಿದ್ದವು. ಅದರಲ್ಲೂ ಒಂದು electron ಕಳೆದುಕೊಂಡ hydrogen , proton ಆಗಿ ಬೆತ್ತಲೆಯಾಗಿತ್ತು. Noble gas ಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. transition metals ಗಳು methodology ಯಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಿದ್ದರಿಂದ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲ, phosphorous ಒಮ್ಮೊಮ್ಮೆ ದಿಗ್ಗನೆ ಹೊತ್ತಿಕೊಳ್ಳುತ್ತಿತ್ತು. Strongest ಅಂತ ಅನ್ನಿಸಿಕೊಂಡ, Iron ಕೂಡ ರಸ್ಟ್ ಹಿಡಿಯತೊಡಗಿತ್ತು. Arsenic ಎಷ್ಟು ವಿಷ ಕಾರಿಯಾಗಿತ್ತೆಂದರೆ, ತನ್ನನ್ನು ತಾನೇ ಕೊಂದುಕೊಳ್ಳುತ್ತಿತ್ತು. ಸಿಕ್ಕಿದವರನ್ನೆಲ್ಲಾ amalgam ಮಾಡಲು mercury ಜಾತಕ ಪಕ್ಷಿಯಂತೆ ಕಾದು ಕುಳಿತಿತ್ತು. ಕೊನೆಗೂ ಒಂದು electron ಕಳೆದುಕೊಂಡ sodium ನೀರಿನಲ್ಲಿ ಬಿದ್ದು ಬುಸ್ ಎಂಬ ಶಬ್ದದೊಂದಿಗೆ ಕಣ್ಮರೆಯಾಯಿತು. ಆಗಲೇ ಅವರಿಗೆ ಓಯಸಿಸ್ ನಂತೆ ಕಂಡದ್ದು ಈ ಕಪ್ಪು ಸುಂದರಿ. ಅವಳು ರೂಪಿನಲ್ಲಿ ಮಾತ್ರ ಕಪ್ಪು. ಗುಣ (chemical properties) ದಲ್ಲಿ ಅವಳನ್ನು ಮೀರಿಸುವವರೇ ಇರಲಿಲ್ಲ. ಒಂದು ಪಕ್ಕದಲ್ಲಿ boron ಇನ್ನೊಂದು ಪಕ್ಕದಲ್ಲಿ nitrogen ಅವಳ ಸ್ಥಾನಕ್ಕೆ ಮೆರುಗು ಕೊಡುತ್ತಿದ್ದರು. ಅವಳೂ ಕೂಡ ಹಾಗೆಯೇ, excited state ನಲ್ಲಿ ಎಲ್ಲರನ್ನೂ ತನ್ನೆಡೆಗೆ ಸೆಳೆದುಕೊಳ್ಳುತ್ತಿದ್ದಳು. ಇಷ್ಟೆಲ್ಲ ಇದ್ದರೂ, ಅವಳು metals ಜೊತೆ ಯಾಕೆ ಸಂಬಂಧ ಬೆಳೆಸಿಕೊಂಡಳೋ ಗೊತ್ತಿಲ್ಲ. ಆದರೆ ಅದೇ ಅವಳಿಗೆ plus point ಆಗಿ ಬದಲಾಯಿತು. ತನ್ನ sharing properties ಕಳೆದುಕೊಂಡು, nucleophile ಆಗಿ ಬದಲಾದಳು. ಅವಳ ಸಾಮ್ರಾಜ್ಯ ವಿಸ್ತರಿಸಿದ್ದೇ ಆಗ. ಜೊತೆಗೇನೇ ಹುಟ್ಟಿಕೊಂಡಿತು organometallic ಕೂಸು. ಪ್ರೀತಿಯಿಂದ ಇದ್ದರೆ,sharing ಮಾಡಿಕೊಳ್ಳುತ್ತೇನೆ, ಇಲ್ಲದಿದ್ದರೆ nucleophile ಆಗಿ attack ಮಾಡುತ್ತೇನೆ, ನೀವೇ nucleophile ಆದರೆ carbene ಎಂಬ electrophile ನಾನಾಗುತ್ತೇನೆ. ಒಟ್ಟಿನಲ್ಲಿ ಎಲ್ಲರನ್ನೂ ತನ್ನೊಳಗೆ ಸೇರಿಸಿಕೊಂಡಿಯೇ ಸಿದ್ದ ಎಂಬ ಹಟಕ್ಕೆ ಬಿದ್ದಿರುವ ಇವಳು, Organic chemistry ಎಂಬ ನಿಜವಾದ ಲೋಕದ ಅನಭಿಷಕ್ತ ರಾಣಿ ಯಾಗಿ ಮೆರೆಯುತ್ತಿದ್ದಾಳೆ. ಅಂದಹಾಗೆ ಅವಳ ಹೆಸರು ಹೇಳಬೇಕಾಗಿಲ್ಲ ತಾನೇ???? ( ಪ್ರದೀಪ ದೇವಾಡಿಗ )
Posted on: Fri, 16 Aug 2013 18:50:45 +0000

Trending Topics



Recently Viewed Topics




© 2015