ಇಂದು ಡಿಸೆಂಬರ್ 29 ನಮ್ಮ - TopicsExpress



          

ಇಂದು ಡಿಸೆಂಬರ್ 29 ನಮ್ಮ ರಾಷ್ಟ್ರ ಕವಿ ಕುವೆಂಪು ಅವರ ಹುಟ್ಟು ಹಬ್ಬ.. ಕವಿ ಮನೆಯ ಹಿಮ್ಮಗ್ಗುಲಲ್ಲಿರುವ ಬೆಟ್ಟಕ್ಕೆ ಹೋಗುವ ದಾರಿಯುದ್ದಕ್ಕೂ ಅಲ್ಲಲ್ಲಿ ಕಲ್ಲು ಮಂಟಪಗಳಿವೆ. ಗುಡ್ಡವನ್ನು ತಲುಪುತ್ತಿದ್ದಂತೆ ಕವಿ ಸಮಾಧಿ ಕಾಣಸಿಗುತ್ತದೆ. ಈ ಪವಿತ್ರ ಸ್ಥಳದ ಸುತ್ತಲೂ ಹಸಿರು ಹಾಸನ್ನು ಬೆಳೆಸಲಾಗಿದೆ. ಇಲ್ಲಿ ದೊಡ್ಡ ವೃತ್ತಾಕಾರದಲ್ಲಿ ವಿಶಿಷ್ಟ ವಿನ್ಯಾಸದಲ್ಲಿ ಜೋಡಿಸಿ ನಿಲ್ಲಿಸಿರುವ ಶಿಲಾಸ್ಮಾರಕಗಳಿವೆ. ಇವು ಈ ಪರಿಸರವನ್ನು ಕಲಾತ್ಮಕಗೊಳಿಸಿವೆ. ಇದನ್ನು ದಾಟಿ ನಡೆದರೆ ಗುಡ್ಡದ ನೆತ್ತಿಯಲ್ಲಿ ಚಿಕ್ಕದೊಂದು ಹಾಸುಬಂದೆ, ಅದರ ಮೇಲೆ ಟಿ.ಎಸ್.ವಿ, ಬಿ.ಎಮ್.ಶ್ರಿ , ಕುವೆಂಪು, ಪೊ.ಚ.ತೆ ಎಂಬ ಅಕ್ಷರಗಳು ಕೆತ್ತಲ್ಪಟ್ಟಿವೆ. ಆ ಮಹನೀಯರೆಲ್ಲ ಇಲ್ಲಿ ಬಂದಿದ್ದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ನಿಂತು ಪೂರ್ವ ದಿಸೆಯನ್ನು ವೀಕ್ಷಿಸಿದರೆ ಗುಡ್ಡಗಳ ಸಾಲು ಸಾಲು, ಹಸಿರುವನರಾಜಿ, ದಿಗಂತ ವಿಸ್ತಾರ ನೀಲಾಕಾಶ, ನೋಡಿ ಕನ್ಮಣಿಯದಂಥ ರಮಣೀಯ ದೃಶ್ಯ ಕಾಣುತ್ತದೆ. ಬೆಳಗು, ಸಂಜೆ,ನಡುಹಗಲು,ಅರ್ಧರಾತ್ರಿ ಹೀಗೆ ದಿವಸದ ಎಲ್ಲ ಹೊತ್ತಿನಲ್ಲಿ ಕವಿ ಇಲ್ಲಿ ಕುಳಿತು ರಚಿಸಿದ ಸ್ಫೂರ್ತಿ ತಾನತಾಣವಿದು. ಇದಕ್ಕೆ ಅವರೇ ಕೊಟ್ಟ ಹೆಸರು ಕವಿಶೈಲ. ಇಲ್ಲಿಂದ ಸೂರ್ಯಾಸ್ತವನ್ನು ನೋಡಬಹುದು. ದೂರದ ಕುಂದಾದ್ರಿ ಕೊದಚಾದ್ರಿಗಲನ್ನೂ ಕಾಣಬಹುದು. Today is the National Poet Sri Kuvempus Birthday. Beautiful view of Rashtra Kavi Kuvempus Kavishaila in Kuppali. Kuppali is a beautiful village in Thirthahalli taluk of Shimoga district in Our Beautiful Karnataka! It is famous for being the childhood home of the renowned Kannada playwright and poet Rashtra Kavi Kuvempu. Indeed, this pen-name Kuvempu (Kannada: ಕುವೆಂಪು) pays homage to the authors home, created as it is from the first letters from his full name Kuppali Venkatappa Puttappa (Venkatappa being his fathers name). Kuppali is also the birthplace of Poornachandra Tejaswi, the son of Kuvempu and a famous Kannada writer himself. It is also the place where Kuvempu and Poornachandra Tejaswi have been cremated. The childhood home of Kuvempu at Kuppali has been converted into a museum by Rashtrakavi Kuvempu Pratishtana (a trust dedicated to Kuvempu). This trust has undertaken immense developmental works in Kuppali to showcase Kuvempu and his works to the external world.
Posted on: Mon, 29 Dec 2014 15:17:14 +0000

Trending Topics



Recently Viewed Topics




© 2015