ಇವತ್ತು ಕಾವ್ಯಸಂಜೆ - TopicsExpress



          

ಇವತ್ತು ಕಾವ್ಯಸಂಜೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸಕ್ರಿಯವಾಗಿ ತೊಡಗಿಕೊಂಡೆ. ಎಂಜಿ ರಸ್ತೆಯಲ್ಲಿ ಕನ್ನಡದ ಕವಿತೆ/ಕಥೆ ಓದುವುದೇ ಒಂದು ಬೆರಗು. ನನಗೆ ಇಷ್ಟವಾದ ಕವಿ ಡಾ.ಸಿಡ್ಡಲಿಂಗಯ್ಯ ಕವಿತೆ ಓದಿದರು. ಲಕ್ಷ್ಮಿ ಚಂದ್ರಶೇಕರ್ ಅನುವಾದದ ಒಳ ಸೂಕ್ಷ್ಮಗಳ ಬಗ್ಗೆ ಮಾತಾಡಿದರೆ, ಬೋಳುವಾರು ಇವತ್ತಿನ ಸುತ್ತಲಿನ ಜಗತ್ತು ತನ್ನತನ ಕಳೆದುಕೊಳ್ಳುತ್ತಿರುವ ಬಗ್ಗೆ ಮಾತಾಡಿದರು. ಅಗ್ರಹಾರ ಕೃಷ್ಣಮೂರ್ತಿಯವರು ಕವಿತೆ ಓದಿದರು. ಆಶಾದೇವಿ ಕವಿತೆ ಕಟ್ಟುವ ಬಗ್ಗೆ ಒಂದೆರಡು ಮಾತಾಡಿದರು. ಕವಿತೆ ಕಥೆ ಓದಿದ ಯುವ ಕವಿಗಳ ಕಣ್ಣಲ್ಲಿ ನಕ್ಷತ್ರಗಳ ಬೆಳಕು. ಮಮತಾ ಜಿ ಸಾಗರ್ ಕಾವ್ಯ ಸಂಜೆ ನಡೆದು ಬಂದ ಹೆಜ್ಜೆಗುರುತುಗಳನ್ನು ನೆನಪು ಮಾಡಿಕೊಟ್ಟರು. ಮೊದಲ ಬಾರಿಗೆ ನಿರೂಪಕನ ಕೆಲಸ ಮಾಡಿದೆ. ೨. ಒಪ್ಪಿಕೊಂಡ ಕೆಲಸಗಳ ಒತ್ತಡವಿದೆ. ಫೇಸ್ಬುಕ್ಕಿಗೆ ಕೆಲದಿನಗಳ ರಜೆ ಕೇಳಿ ಅರ್ಜಿ ಹಾಕುತ್ತಿರುವೆ. ಆಗೊಮ್ಮೆ ಈಗೊಮ್ಮೆ ಇತ್ತ ಬಂದು, ನಿಮ್ಮೆಲ್ಲರ ಚಟುವಟಿಕೆಗಳನ್ನು ಗಮನಿಸುವೆ-ಸುಮ್ಮನೆ ಒಬ್ಬ ‘observer ಆಗಿ. ೩. ಈಗ ಸುಂದರವಾದ ಈ ಮಾತುಗಳೊಂದಿಗ ನಿಮಗೆಲ್ಲ ಶುಭರಾತ್ರಿ- ಹೇಳುವೆ : Words never explain, rather on contrary, they explain away. Only experience can explain, only experience can be the explanation. ಇಂತಿ ಪ್ರೀತಿಯಿಂದ, ಸ್ವಾಮಿ ೮೮೬೧೨೫೭೯೩೫
Posted on: Fri, 01 Nov 2013 16:30:14 +0000

Trending Topics



Recently Viewed Topics




© 2015