ಈ ಧರ್ಮಾಂಧತೆ,ಜಾತೀಯತೆ - TopicsExpress



          

ಈ ಧರ್ಮಾಂಧತೆ,ಜಾತೀಯತೆ ಅನ್ನೋದು ಒಂಥರಾ ಪುರಾತನ ಗಾಯ.ಕೆಲವು ಮಹಾತ್ಮರು ಈ ಗಾಯಕ್ಕೆ ಆಗಾಗ ಔಷಧಿ ಹಚ್ಚುವ ಕೆಲಸ ಮಾಡುತ್ತಾರೆ.ಇನ್ನೇನು ವಾಸಿಯಾಯಿತು ಅಂದುಕೊಳ್ಳುತ್ತಿದ್ದಂತೆಯೇ ಹಳೆಯ ಉಗುರುಗಳು ಮತ್ತೆ ಕೆರೆಯಲಾರಂಭಿಸುತ್ತವೆ.ಗಾಯ ಮತ್ತೆ ವ್ರಣವಾಗುತ್ತದೆ.ಮತ್ತೆ ಕೀವು,ರಕ್ತ,ದುರ್ಗಂಧ ಎದುರಾಗುತ್ತವೆ ಮೊದಲಿನಂತೆ. ಇದಕ್ಕಿರುವ ಒಂದೇ ಒಂದು ಪರಿಹಾರವೆಂದರೆ ಯಾರೋ ಯಾವತ್ತೋ ಬರೆದಿಟ್ಟ ಧರ್ಮಶಾಸ್ತ್ರಗಳನ್ನು(ಯಾವುದೇ ಧರ್ಮವಾಗಿರಲಿ) ಮೂಲೆಗಿಟ್ಟು ಪ್ರತಿಯೊಬ್ಬರೂ ತಂತಮ್ಮ ಹೃದಯದ ಮಾತುಗಳಿಗೆ ಬೆಲೆ ಕೊಡೋದು.ಅಂತರಂಗದ ದನಿಗೆ ಕಿವಿಗೊಡೋದು.ಚಿಂತನೆಯಲ್ಲೂ,ತತ್ವದಲ್ಲೂ,ಸಿದ್ಧಾಂತದಲ್ಲೂ ಸ್ವಂತಿಕೆ ಮೆರೆದು ಸಂಪೂರ್ಣ ಬದುಕನ್ನು ತಮ್ಮದೇ ಸುಪರ್ದಿಗೆ ತೆಗೆದುಕೊಳ್ಳೋದು.ಇದು ಸಾಧ್ಯಾನ? ಯೋಚಿಸಬೇಕು. ಹೊಸತಿನೆಡೆಗೆ ಅರ್ಥಾತ್ ವಾಸ್ತವದೆಡೆಗೆ ಅರ್ಥಾತ್ ಕಾರುಣ್ಯದೆಡೆಗೆ ಅರ್ಥಾತ್ ಹೃದಯವೈಶಾಲ್ಯತೆಯೆಡೆಗೆ ತುಡಿಯದವರ ಬಗ್ಗೆ ಕನಿಕರವಿರಲಿ ಅಷ್ಟೇ.ಚೌಕಟ್ಟು ದಾಟದ ಇಂಥ ಮನೋಧರ್ಮದವರನ್ನು ಕಂಡು ಮರುಗಬೇಕಷ್ಟೇ.ಸಿಕ್ಕಿರುವ ಒಂದು ಅಪರೂಪದ ಜೀವನಕ್ಕೆ ಅನ್ಯಾಯವಾಗಿ ಈ ಬಗೆಯ ಹಳೆಯ ಕೊಳೆ ಮೆತ್ತಿಸಿಕೊಂಡು ತಾವೇ ನಿರ್ಮಿಸಿಕೊಂಡ ಗೋಡೆಗಳ ನಡುವೆ ನರಳಿ ನರಳಿ ಹೀಗೇ ಅಂತ್ಯವಾಗುತ್ತಾರಲ್ಲ ಅಂತ ನೊಂದು ಎರಡು ಹನಿ ಕಣ್ಣೀರು ಸುರಿಸಬೇಕಷ್ಟೇ...
Posted on: Sun, 01 Sep 2013 05:51:45 +0000

Trending Topics



Recently Viewed Topics




© 2015