ಏರ್ ಇಂಡಿಯಾ ಸಂಸ್ಥೆ ಗಗನ - TopicsExpress



          

ಏರ್ ಇಂಡಿಯಾ ಸಂಸ್ಥೆ ಗಗನ ಸಖಿಯರಿಗೆ ಮೈಸೂರು ಸಿಲ್ಕ್ ಸ್ಯಾರಿಯನ್ನ ಸಮವಸ್ತ್ರವಾಗಿ ಮಾಡಲು ನಿರ್ಧರಿಸಿ, 10 ಸಾವಿರ ಸೀರೆಗೆ ಆರ್ಡರ್ ಮಾಡಿದ ಬೆನ್ನಲ್ಲೇ, ರಾಷ್ಟ್ರಪತಿ ಭವನ ಇದೀಗ 50 ಮೈಸೂರು ಸಿಲ್ಕ್ ಶಾಲ್ ಗಳಿಗೆ ಆರ್ಡರ್ ಮಾಡಿದೆ. ವಿಶೇಷತೆ ಅಂದ್ರೆ ಈ ಬಾರಿಯ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಆಗಮಿಸುತ್ತಿರುವ ಬರಾಕ್ ಒಬಾಮಾ ಅವರಿಗೆ ರಾಷ್ಟ್ರಪತಿ ಮೈಸೂರು ಸಿಲ್ಕ್ ನ ಶಾಲ್ ಹೊದಿಸಿ, ಸನ್ಮಾನಿಸಲು ನಿರ್ಧರಿಸಿದ್ದಾರೆ. ಕನ್ನಡ ನಾಡಿನ ಸಂಕೇತವಾಗಿರುವ ವಿಶ್ವವಿಖ್ಯಾತ ಮೈಸೂರು ಸಿಲ್ಕ್ ನ ಶಾಲ್ ಅನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ನೀಡುತ್ತಿರುವುದನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷರಾದ ಬಸವರಾಜು ಸ್ಪಷ್ಟಪಡಿಸಿದ್ದಾರೆ. -------- ಇನ್ನು ಯಾವುದೇ ವಿದೇಶಿ ಅತಿಥಿಗಳು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ್ರೆ, ಅವರಿಗೆ ಮೈಸೂರು ರೇಷ್ಮೆಯ ಶಾಲ್ ಹೊದಿಸಿ ಗೌರವಿಸುವ ಸಂಪ್ರದಾಯವಿದೆ. ಅದೇ ಸಂಪ್ರದಾಯ, ಒಬಾಮಾ ಭೇಟಿ ಸಂದರ್ಭದಲ್ಲೂ ನಡೆಸಲು ರಾಷ್ಟ್ರಪತಿ ಭವನ ನಿರ್ಧರಿಸಿದೆ ಎನ್ನಲಾಗ್ತಿದೆ.
Posted on: Fri, 02 Jan 2015 09:01:09 +0000

Trending Topics



Recently Viewed Topics




© 2015