ಒಬ್ಬಾಕೆ ಕೇಳಿದ್ರು : ಏನ್ರಿ - TopicsExpress



          

ಒಬ್ಬಾಕೆ ಕೇಳಿದ್ರು : ಏನ್ರಿ ನಿಮ್ ಇಂಡಸ್ಟ್ರಿ ಇಷ್ಟೊಂದ್ ಕುಲಗೆಟ್ಟಿದೆ, TV9 ನಲ್ಲಿ ಅಷ್ಟೊಂದ್ ಜನಗಳ ಮಾನ ಹರಾಜಾಕ್ಬಿಟ್ರಲ್ಲ...!? ನಾನ್ ಹೇಳಿದ್ದು : ಅದೊಂಥರ TV sponsorship ಟೆಂಡರ್ ಕಾಲ್ ಇದ್ದಂಗೇ ರೀ.. ಅವಾಗಾವಾಗ tender call ಮಾಡ್ತಾನೇ ಇರ್ತಾರೆ...! ಆಕೆ : ಥೂ... ನಿಮಗೇನೂ ಅನ್ಸಲ್ವಾ.. ನಿಮ್ ಇಂಡಸ್ಟ್ರೀಲಿ ಇರೋರು ಹಂಗೆಲ್ಲಾ ಮಾಡಿದ್ರೆ ..! ನಾನು : ಹ್ಞೂಂ.. ಏನೇನೋ ಅನ್ಸಿತ್ತು.. ಅದಕ್ಕೆ ಈ ತಿಂಗ್ಳು ಕೇಬಲ್ ಬಿಲ್ ಕೊಡೋದ್ ಬ್ಯಾಡ ಅನ್ಕೊಂಡಿದೀನಿ...! ಆಕೆ : ಕೇಬಲ್ ಬಿಲ್ ಗೂ ಅದಕ್ಕೂ ಏನ್ ಸಂಬಂಧ...!? ನಾನು : ಅದೇನೋ ಮಾಡಿದ್ರು ಅಂದ್ರಲ್ಲ ಅವರೇನ್ ನನ್ನ ರಕ್ತಸಂಬಂಧಿಗಳಾ ಹಂಗಾದ್ರೆ...!? ಆಕೆ : ಅಲ್ಲಾ, ನೀವೂ ಅದೇ ಇಂಡಸ್ಟ್ರೀಲಿ ಇದೀರಲ್ಲ ಅದಕ್ಕೆ ಕೇಳಿದ್ದು...!? ನಾನು : ಸಮುದ್ರ ಅಂದ್ಮೇಲೆ ಶಾರ್ಕೂ ಇರತ್ತೆ ಡಾಲ್ಫಿನ್ನು ಇರತ್ತೆ...! ಶಾರ್ಕ್ ಇದೆ ಅಂತ ಡಾಲ್ಫಿನ್ ಇರಬಾರ್ದಾ..!? ಆಕೆ : ಆದ್ರೂ ನಿಮ್ ಇಂಡಸ್ಟ್ರಿ ಟೂ ಮಚ್.. ಹಿಂಗಂದೆ ಅಂತ ತಪ್ಪು ತಿಳ್ಕೋಬೇಡಿ..! ನಾನು : ಸಾಮಾನ್ಯ ಮನುಷ್ಯರಿಂದ ಹಿಡಿದು ದೇವಮಾನವರು ಅಂತ ಬಿಲ್ಡಪ್ ಕೊಡೋ ಸ್ವಾಮೀಜಿಗಳು, ಆಶ್ರಮದ ಹೆಸರಿನಲ್ಲಿ ಉದ್ಯಮಗಳನ್ನ ನೆಡೆಸೋರ ತನಕ, ಸಮಾಜದ ಎಲ್ಲಾ ಸ್ತರಗಳಲ್ಲಿ ಈ ಪ್ರಾಬ್ಲಂ ಇದೆ.. This is not only cinema industrys problem. This is happening in each and every layer of society, Including police and judicial system..! ಎಲ್ಲಾರಿಗೂ ಈ ಸತ್ಯ ಗೊತ್ತಿದೆ, ಆದ್ರೆ ಜನಗಳ attention ಸಿನಿಮಾದವರ ಕಡೆ ಜಾಸ್ತಿ ಇರೋದ್ರಿಂದ highlight ಆಗ್ತಾ ಇದೆ...! ನೀವ್ ಹಿಂಗಂದ್ರಿ ಅಂತ ನಾ ಬೇಜಾರ್ ಮಾಡ್ಕೊಳಕ್ಕಾಗತ್ತಾ...!? ಆಕೆ : ಅದೂ ಸರೀನೇ ಬಿಡಿ.. ಹೋಗ್ಲಿ ನೀವ್ ಯಾವ್ ಟೈಪು...!? ನಾನು : ನೀವ್ ಯಾವ್ ಚಾನೆಲ್ ನಲ್ಲಿ ಕೆಲಸ ಮಾಡ್ತಾ ಇದೀರಾ..!? ಆಕೆ : ವಾಟ್...!? ನಾನು : ಯಾವ್ ಟೈಪು ಅಂತ ಕೇಳಿದ್ರಲ್ಲ, ಅದಕ್ಕೆ ನೀವ್ ಯಾವ್ ಚಾನೆಲ್ ನಲ್ಲಿ ಕೆಲಸ ಮಾಡ್ತಾ ಇದೀರಾ ಅಂತ ತಿಳ್ಕೊಂಡ್ ಮಾತಾಡಾಣ ಅಂತ ಕೇಳ್ದೇ ರೀ ಮೇಡಮ್ಮೋರೆ..! ಆಕೆ : I am not working for any channel, ಸುಮ್ನೆ ಕೇಳ್ದೆ ಅಷ್ಟೇ..! ನಾನು : ಹೌದಾ.. ನಾನು ಫ್ಯಾಮಿಲಿ ಟೈಪು..! ಆಕೆ : ಹಂಗಂದ್ರೆ...! ನಾನು : ಲೂಸಿಯಾ ಸಿನಿಮಾ ನೋಡಿ...!
Posted on: Wed, 10 Sep 2014 14:07:20 +0000

Trending Topics



Recently Viewed Topics




© 2015