ಕೇಂದ್ರ ಮತ್ತು ರಾಜ್ಯ - TopicsExpress



          

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡೀಸಲ್, ಪೆಟ್ರೋಲ್ ಹಾಗೂ ಮದ್ಯಕ್ಕೂ ಬೆಲೆ ಏರಿಸಿರುವುದರಿಂದ ಜನ ಸಾಮಾನ್ಯರಿಗೆ ಅನ್ಯಾಯವಾಗಿದೆ ಎಂದು ಶಾಸಕ ಸಿ.ಎನ್ ಬಾಲಕೃಷ್ಣ ಹೇಳಿದರು. ನುಗ್ಗೇಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಪಡಿತರ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮತನಾಡಿ, ಅಕ್ಕಿಯನ್ನು ಮಾತ್ರ ೧ ರೂ.ಗೆ ಕೊಟ್ಟು ರೈತರಿಗೆ ಬೇಕಾದ ರಸಗೊಬ್ಬರ ಇತರೆ ಪದಾರ್ಥಗಳ ಬೆಲೆ ಏರಿಸಿರುವುದರಿಂದ ಜನ ಸಾಮಾನ್ಯರು ಬರಗಾಲದಲ್ಲಿ ಬದುಕುವುದು ಕಷ್ಟವಾಗಿದೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿ ಹದಗೆಟ್ಟಿದೆ. ಉತ್ತಮ ಆರ್ಥಿಕ ಭದ್ರತೆ ಇಲ್ಲದೆ ದೇಶ ಹೆದರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಸಮಾರಂಭದಲ್ಲಿ ಗ್ರಾಪಂ ಉಪಾಧ್ಯಕ್ಷ ಎಲ್ಲಯ್ಯ, ಎಚ್‌ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಕೆಂಪನಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್.ದೊರೆಸ್ವಾಮಿ, ಜೆಡಿಎಸ್ ಮುಖಂಡ ಮುರಳಿ, ಗ್ರಾಪಂ ಮಾಜಿ ಅಧ್ಯಕ್ಷ ಎಚ್. ಎಂ.ಗೋಪಾಲ್, ಮಾಜಿ ಉಪಾಧ್ಯಕ್ಷ ಬಸವಲಿಂಗಪ್ಪ, ಮಾಜಿ ಗ್ರಾಪಂ ಉಪಾಧ್ಯಕ್ಷ ರಂಗಸ್ವಾಮಿ, ಪಿಡಿಓ ಗಂಗಾಧರ್ ಹಾಜರಿದ್ದರು. ನಾವು ಕಾರ್ಯ ನಿರ್ವಹಿಸುವ ಸ್ಥಳ ಯಾವುದೇ ಆಗಿರಲಿ, ನಮ್ಮ ಗುರಿ ಧರ್ಮ, ನಿಷ್ಠೆ ನ್ಯಾಯಯುತವಾಗಿರಬೇಕು ಎಂದು ಹಿರೀಸಾವೆ ಪೊಲೀಸ್ ಠಾಣಾ ಸಬ್‌ಇನ್ಸ್‌ಪೆಕ್ಟರ್ ಕೆ.ವಿ.ಕೃಷ್ಣಪ್ಪ ತಿಳಿಸಿದರು. ಪೊಲೀಸ್ ಠಾಣೆಯಲ್ಲಿ ಬುಧವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೊಲೀಸರಿಗೆ ನನ್ನಿಂದ ಅದು ಅಸಾಧ್ಯ ಎನ್ನುವ ಆಲೋಚನೆ ಇರಬಾರದು, ಯಾವುದೇ ನಿಖರ ಮಾಹಿತಿ ಇಲ್ಲದಂತಹ ಪ್ರಕರಣದ ಕಾರ್ಯಾಚರಣೆಯಲ್ಲಿ ತೊಡಗಿ ಹಗಲು ಇರುಳು ಎನ್ನದೇ ತಾಳ್ಮೆಯಿಂದ ಎಚ್ಚರಿಕೆಯಿಂದ ಪ್ರಕರಣವನ್ನು ಕೈಗೆತ್ತುಕೊಂಡರೆ, ಅದರಲ್ಲಿ ಯಶಸ್ಸು ಗಳಿಸಬಹುದು ಎಂದು ಕಿವಿ ಮಾತು ಹೇಳಿದರು. ವರ್ಗಾವಣೆಯಾಗಿರುವ ಠಾಣಾ ಸಿಬ್ಬಂದಿಗಳಾದ ವೆಂಕೋಬರಾವ್, ಪ್ರೇಮರಾಜ್, ತಿಮ್ಮೇಗೌಡ, ಕೃಷ್ಣಪ್ಪ, ಹರೀಶ್, ಸುಬ್ರಮಣ್ಯ, ಗಿರೀಶ್, ನವೀನ್ ಹಾಗೂ ಮಧು ಅವರನ್ನು ಅಭಿನಂದಿಸಲಾಯಿತು. ಎಎಸ್‌ಐ ಚಂದ್ರೇಗೌಡ, ನಾಗರಾಜು, ಠಾಣಾ ಸಿಬ್ಬಂದಿವರ್ಗದವರು ಹಾಗೂ ಇತರರಿದ್ದರು. ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿದ ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಅವರನ್ನು ಪರಿಶಿಷ್ಟ ಜತಿ ಮತ್ತು ಪರಿಶಿಷ್ಟ ನೌಕರರ ಸಂಘ ಹಾಗೂ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹಡೇನಹಳ್ಳಿ ಲೋಕೇಶ್, ಯಾವುದೇ ಸಂಘಟನೆಯಲ್ಲಿ ಒಡಕು ಬರಬಾರದು. ಮಾತಿನಲ್ಲಿ ಜತ್ಯತೀತ ಎಂದು ಮನಸ್ಸಿನಲ್ಲಿ ಜತೀಯತೆ ತೋರುವ ವ್ಯಕ್ತಿಗಳು ಸಮಾಜದಲ್ಲಿದ್ದಾರೆ. ಇಂತಹವರಿಂದ ಸಮಾಜಕ್ಕೆ ಕೆಡುಕು ತಪ್ಪಿದ್ದಲ್ಲ ಎಂದರು. ತನ್ನ ವ್ಯಕ್ತಿತ್ವ ಉತ್ತಮವಾಗಿದ್ದರೆ ಸಮಾಜದ ಕೆಡುಕನ್ನು ತಿದ್ದಲು ಸಾಧ್ಯ. ಅನ್ಯಾಯದ ವಿರುಧ್ದ ಹೋರಾಡುವ ಮನೋಭಾವನೆ ಸಂಘಟನೆಯಲ್ಲಿ ಇರಬೇಕು. ಸಮಾಜದ ಎಲ್ಲಾ ಶ್ರೇಣಿಗಳಲ್ಲಿ ಆಗುತ್ತಿರುವ ಅನ್ಯಾಯದ ವಿರುಧ್ದ ಹೋರಾಟ ಮಾಡಬೇಕುಎಂದರು. ಸಹೋದ್ಯೋಗಿಗಳು ಲೊಕೇಶ್‌ರೊಂದಿಗಿನ ಒಡನಾಟ ಹಂಚಿಕೊಂಡರು. ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಜಲೇಂದ್ರ, ಸದಸ್ಯೆ ಶೋಭ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮಂಜೇಗೌಡ, ಕೃಷ್ಣಮೂರ್ತಿ ಇದ್ದರು. ಈ ದಿನದ ಪ್ರಾಯೋಜಕರು: Systems Technology : ಸಿಸ್ಟಮ್ ಟೇಕ್ನಾಲಜಿ : ಮಂಡ್ಯ-ಮೈಸೂರು-ಹಾಸನ : 7259108417: Today Offer : Intel Processor2.6 Ghದ್ದಾ, Ram 1GB, 160GB Hard Disk, DVD R/W, Mouse, TFT Monitor 15 Inch.. Offer Price : ಕೇವಲ 9999/- Only. Home Delivery (High Configuration ಕಂಪ್ಯೂಟರ್ ಗಳನ್ನು Assemble ಮಾಡಿಕೊಡಲಾಗುವುದು. ಎಲ್ಲಾ ಕಂಪ್ಯೂಟರ್ ಬಿಡಿಭಾಗಗಳ ಮೇಲೆ ಕಂಪನಿ ಆಧಾರದ ಮೇಲೆ 2 ವರ್ಷ ಅಥವಾ 3 ವರ್ಷ ಗ್ಯಾರಂಟಿ ಕೊಡಲಾಗುವುದು)
Posted on: Fri, 06 Sep 2013 04:50:58 +0000

Trending Topics



Recently Viewed Topics




© 2015