ಕಬ್ಬಿಗೆ ಬೆಲೆ ನಿಗದಿ ಮಾಡುವ - TopicsExpress



          

ಕಬ್ಬಿಗೆ ಬೆಲೆ ನಿಗದಿ ಮಾಡುವ ವೇಳೆ ರಾಜ್ಯಸರ್ಕಾರ ಖಾಸಗಿ ಕಾರ್ಖಾನೆಗಳು ನಡೆಸುವ ಹುನ್ನಾರಕ್ಕೆ ಯಾವುದೇ ಕಾರಣಕ್ಕೂ ಮಣಿಯಬಾರದು. ಸಕ್ಕರೆ ಬೆಲೆ, ಕಾರ್ಖಾನೆಗಳ ಉಪ ಉತ್ಪನ್ನಗಳ ಬೆಲೆ ಹಾಗೂ ಕಬ್ಬಿನ ಇಳುವರಿಯನ್ನು ಗಣನೆಗೆ ತೆಗೆದುಕೊಂಡು ಕಬ್ಬಿಗೆ ವೈಜನಿಕ ಬೆಲೆ ನಿಗದಿಪಡಿಸಬೇಕು. ರೈತರ ಹಿತ ಕಾಪಾಡುವುನ್ನು ಸರ್ಕಾರ ಮುಖ್ಯ ಗುರಿಯಾಗಿಸಿಕೊಳ್ಳಬೇಕಿದೆ. ಕಳೆದ ವರ್ಷ ಕಂಪನಿಗಳು ಕಬ್ಬಿಗೆ ೨೪೦೦ ಮುಂಗಡ ಹಣ ನೀಡಿದ್ದೆಷ್ಟು ಅಷ್ಟೇ. ಸರ್ಕಾರವೂ ಅಂತಿಮ ಬೆಲೆ ನಿಗದಿ ಮಾಡಲಿಲ್ಲ, ಕಾರ್ಖಾನೆಗಳೂ ರೈತರಿಗೆ ಹೆಚ್ಚಿನ ಬೆಲೆ ಕೊಡಲಿಲ್ಲ. ಸಂಪ್ರದಾಯದಂತೆ ಈ ಬಾರಿಯೂ ಕಬ್ಬಿಗೆ ಸರ್ಕಾರ ದರ ನಿಗದಿ ಮಾಡುವ ಮುನ್ನವೇ ಕಾರ್ಖಾನೆಗಳು ಕಬ್ಬು ಅರೆಯುವಿಕೆ ಕಾರ್ಯ ಆರಂಭಿಸಿವೆ. ಆ.೨೯ಕ್ಕೆ ಕಬ್ಬಿನ ದರ ನಿಗದಿ ಮಾಡುವುದಾಗಿ ಹೇಳಿದ ಸರ್ಕಾರ ಇಲ್ಲಿಯವರೆಗೂ ಬೆಲೆ ನಿಗದಿಗೆ ಮನಸ್ಸು ಮಾಡಿಲ್ಲ. ರೈತರು ಸಾಲ-ಸೋಲ ಮಾಡಿ ಕಷ್ಟಪಟ್ಟು ಕಬ್ಬನ್ನು ಬೆಳೆದಿದ್ದಾರೆ. ಕಬ್ಬಿಗೆ ಈ ಬಾರಿ ಉತ್ತಮ ಬೆಲೆ ಸಿಗಬಹುದೆಂಬ ಆಸೆಯಿಂದ ಎದುರುನೋಡುತ್ತಿದ್ದಾರೆ. ಆದರೆ, ಸರ್ಕಾರ ಕಬ್ಬಿನ ಬೆಲೆ ನಿಗದಿಗೆ ಮೀನ-ಮೇಷ ಎಣಿಸುತ್ತಾ, ಕುಂಟುನೆಪ ಹೇಳುತ್ತಾ ಮುಂದೂಡುತ್ತಲೇ ಬರುತ್ತಿದೆ. ರೈತರು ಕಳೆದ ಸಾಲಿನಲ್ಲಿ ನೀರು, ಮಳೆಯಿಲ್ಲದೆ, ಬೆಳೆ ಇಲ್ಲದೆ ದುಸ್ಥಿತಿ ಎದುರಿಸಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ರೈತರ ಸಂಕಷ್ಟವನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಕಬ್ಬಿಗೆ ವೈಜನಿಕ ಬೆಲೆ ನಿಗದಿಪಡಿಸಿ ಈ ದಿನದ ಪ್ರಾಯೋಜಕರು: Systems Technology : ಸಿಸ್ಟಮ್ ಟೇಕ್ನಾಲಜಿ : ಮಂಡ್ಯ-ಮೈಸೂರು-ಹಾಸನ : 7259108417: Today Offer : Intel Processor2.6 Ghz, Ram 1GB, 160GB Hard Disk, DVD R/W, Mouse, TFT Monitor 15 Inch.. Offer Price : ಕೇವಲ 9999/- Only. Home Delivery (High Configuration ಕಂಪ್ಯೂಟರ್ ಗಳನ್ನು Assemble ಮಾಡಿಕೊಡಲಾಗುವುದು. ಎಲ್ಲಾ ಕಂಪ್ಯೂಟರ್ ಬಿಡಿಭಾಗಗಳ ಮೇಲೆ ಕಂಪನಿ ಆಧಾರದ ಮೇಲೆ 2 ವರ್ಷ ಅಥವಾ 3 ವರ್ಷ ಗ್ಯಾರಂಟಿ ಕೊಡಲಾಗುವುದು)
Posted on: Mon, 02 Sep 2013 03:02:49 +0000

Trending Topics



Recently Viewed Topics




© 2015