ಗಣರಾಜ್ಯೋತ್ಸವ - TopicsExpress



          

ಗಣರಾಜ್ಯೋತ್ಸವ : ________________ ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರ೦ದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸ೦ವಿಧಾನ ಜಾರಿಗೆ ಬ೦ದು ಭಾರತವು ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರ೦ದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯ೦ತ ಸರ್ಕಾರಿ ರಜಾ ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು೦ಟು. ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ನಡೆಯುತ್ತದೆ. ಆಗಸ್ಟ್ ೧೫ ೧೯೪೭ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ ೪ ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು.ನವೆಂಬರ್೨೬,೧೯೪೯ ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬ ೧೯೫೦ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತ೦ತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೩೦ ರ೦ದು ಭಾರತ ರಾಷ್ಟ್ರೀಯ ಕಾ೦ಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊ೦ಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊ೦ಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎ೦ದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತ೦ತ್ರ್ಯಾನ೦ತರ ಭಾರತದ ಸ೦ವಿಧಾನವನ್ನು ಈ ದಿನದ೦ದೇ ಜಾರಿಗೆ ತರಲಾಯಿತು. ಈ ದಿನದಂದು ಭಾರತವು ಇತರ ದೇಶಗಳ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತದೆ. ೧೯೫೦ ಅಧ್ಯಕ್ಷರು ಸುಕಾರ್ನೊ ಇ೦ಡೋನೇಷ್ಯಾ ೧೯೫೪ ಕಿ೦ಗ್ ಜಿಗಮೆ ದೊರ್ಜಿ ವಾ೦ಗಚಕ್ ಭೂತಾನ್ ೧೯೫೫ ಗವನ೯ರ್ ಜನರಲ್ ಮಲ್ಲಿಕ್ ಗುಲಾಮ್ ಮೊಹಮ್ಮದ್ ಪಾಕಿಸ್ತಾನ ೧೯೫೮ ಮಾಷ೯ಲ್ ಯೆ ಜಿನ್ ಯಿ೦ಗ್ ಚೀನಾ ೧೯೬೦ ಪ್ರಧಾನ ಮ೦ತ್ರಿ ಕ್ಲೈಮ೦ಟ್ ವೊರೊಸಿಲ್ವೊ ಸೊವಿಯತ್ ಯುನಿಯನ್ ೧೯೬೧ ರಾಣಿ ಎಲಿಜಾಬೆತ್ ಯುನ್ಯಟೆಡ್ ಕಿ೦ಗಡಮ್ ೧೯೬೩ ಕಿ೦ಗ್ ನೊರೊಡೊಮ್ ಸಿನೌಕ್ ಕಾ೦ಬೊಡಿಯಾ ೧೯೭೬ ಪ್ರಧಾನ ಮಂತ್ರಿ ಜಾಕ್ಸ್ ಚಿರಾಕ್ France ೧೯೭೮ ರಾಷ್ಟ್ರಪತಿ ಡಾ. ಪ್ಯಾಟ್ರಿಕ್ ಹಿಲ್ಲರಿ Republic of Ireland ಐರ್ಲ್ಯಾಂಡ್ ೧೯೮೬ ಪ್ರಧಾನ ಮಂತ್ರಿ ಆಂಡ್ರಿಯಾಸ್ ಪಪನ್ಡರ್ಯೂ ಗ್ರೀಸ್ ಗ್ರೀಸ್ ೧೯೯೨ ರಾಷ್ಟ್ರಪತಿ ಮಾರಿಯೊ ಸೋರೆಸ್ Portugal ಪೋರ್ಚುಗಲ್ ೧೯೯೫ ರಾಷ್ಟ್ರಪತಿ ನೆಲ್ಸನ್ ಮಂಡೇಲ[೧] South Africa ದಕ್ಷಿಣ ಆಫ್ರಿಕ ೧೯೯೬ ರಾಷ್ಟ್ರಪತಿ ಡಾ. ಫರ್ನ್ಯಾನ್ಡೋ ಹೆನ್ರಿಕ್ ಕಾರ್ದೊಸೊ ಬ್ರೆಜಿಲ್ ಬ್ರೆಜಿಲ್ ೧೯೯೭ ಪ್ರಧಾನ ಮಂತ್ರಿ ಬಸ್ದಿಯೊ ಪಾಂಡೆ ಟ್ರಿನಿಡಾಡ್ ಮತ್ತು ಟೊಬೆಗೊ ಟ್ರಿನಿಡಾಡ್ ಮತ್ತು ಟೊಬೆಗೊ ೧೯೯೮ ರಾಷ್ಟ್ರಪತಿ ಜಾಕ್ಸ್ ಚಿರಾಕ್ France ೧೯೯೯ ರಾಜ ಬೀರೇದ್ರ ಬೀರ್ ಬಿಕ್ರಮ್ ಶಾಹ್ ದೇವ್ ನೇಪಾಳ ನೇಪಾಲ ೨೦೦೦ ರಾಷ್ಟ್ರಪತಿ ಒಲೆಸುಗುನ್ ಒಬಸಾಂಜೊ ನೈಜೀರಿಯ ನೈಜೀರಿಯ ೨೦೦೧ ರಾಷ್ಟ್ರಪತಿ ಅಬ್ದೆಲ್‌ಅಜೀಜ್ ಬೌತೆಫ್ಲಿಕ Algeria ಅಲ್ಜೀರಿಯ ೨೦೦೨ ರಾಷ್ಟ್ರಪತಿ ಕಸ್ಸಮ್ ಉತೀಮ್ ಮಾರಿಷಸ್ ಮಾರಿಷಸ್ ೨೦೦೩ ರಾಷ್ಟ್ರಪತಿ ಮೊಹಮ್ಮದ್ ಖಾತಾಮಿ Iran ೨೦೦೪ ರಾಷ್ಟ್ರಪತಿ ಲುಯಿಜ್ ಇನಾಸಿಒ ಲುಲ ಡ ಸಿಲ್ವ ಬ್ರೆಜಿಲ್ ಬ್ರೆಜಿಲ್ ೨೦೦೫ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ Bhutan ಭೂತಾನ್ ೨೦೦೬ ರಾಜ ಅಬ್ದುಲ್ಲಹ್ ಬಿನ್ ಅಬ್ದುಲ್‌ಅಜೀಜ್ ಅಲ್-ಸೌದ್ Saudi Arabia ಸೌದಿ ಅರೇಬಿಯ ೨೦೦೭ ರಾಷ್ಟ್ರಪತಿ ವ್ಲಾದಿಮಿರ್ ಪುತಿನ್ ರಷ್ಯಾ ರಷ್ಯಾ ೨೦೦೮ ರಾಷ್ಟ್ರಪತಿ ನಿಕೊಲಸ್ ಸಾರ್ಕೋಜಿ France ೨೦೦೯ ರಾಷ್ಟ್ರಪತಿ ನೂರ್ಸುಲ್ತಾನ್ ನಜರ್ಬಯೇವ್ Kazakhstan ೨೦೧೦ ರಾಷ್ಟ್ರಪತಿ ಲೀ ಮ್ಯೂಂಗ್ ಬಕ್ ದಕ್ಷಿಣ ಕೊರಿಯ ೨೦೧೧ ರಾಷ್ಟ್ರಪತಿ ಸುಸಿಲೊ ಬಂಬಾಂಗ್ ಯುಧೊಯೊನೊ ಇಂಡೋನೇಷ್ಯಾ ೨೦೧೨ ರಾಷ್ಟ್ರಪತಿ ಯಿಂಗ್ಲುಕ್ ಶಿನಾವತ್ರ ಥೈಲ್ಯಾಂಡ್ ೨೦೧೩ ರಾಜ ಜಿಗ್ಮೆ ವಾಂಗ್‍ಚುಕ್ ಭೂತಾನ್ ೨೦೧೪ ಪ್ರಧಾನ ಮಂತ್ರಿ ಶಿಂಜೊ ಅಬೆ ಜಪಾನ್ ೨೦೧೫ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮ ಅಮೆರಿಕ ಸಂಯುಕ್ತ ಸಂಸ್ಥಾನಗಳು
Posted on: Sun, 25 Jan 2015 19:07:00 +0000

Trending Topics



Recently Viewed Topics




© 2015