ಜೀವನದ ಸತ್ಯಗಳ ಬಗ್ಗೆ - TopicsExpress



          

ಜೀವನದ ಸತ್ಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ಕ್ರಿಶ್ಚಿಯನ್ ಹುಡುಗಿ ! ನಾನು ಅಮ್ಕೋ ಬ್ಯಾಟರೀಸ್ ಲಿಮಿಟೆಡ್ ಸಂಸ್ಥೆಯಲ್ಲಿ ಸುಮಾರು ಹದಿನೆಂಟು ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದೆ. ಆಗಷ್ಟೇ ಮದುವೆಯಾಗಿದ್ದ ನನ್ನ ಸಹೋದ್ಯೋಗಿಯ ಹೆಸರು ಬಿಂಧು ಶಿಬು ಜಾನ್. ಬದುಕಿನಲ್ಲಿ ಗಂಭೀರವಾದ ನಡೆ, ಸೋಶಿಯಲ್ ಮೂವ್, ಅಚೀವ್ಮೆಂಟ್ ದಾರಿ, ದೈನಂದಿನ ಚಟುವಟಿಕೆಗಳಲ್ಲಿ ಲವಲವಿಕೆ, ಜನಗಳಲ್ಲಿನ ವಿಶ್ವಾಸ, ಧರ್ಮಗಳಲ್ಲಿನ ವ್ಯತ್ಯಾಸ ಹೀಗೆ ಹತ್ತು ಹಲವಾರು ವಿಷಯಗಳಲ್ಲಿ ಅಂದಿನ ಮಟ್ಟಿಗೆ ನನಗೆ ಬಹಳ ಆಶ್ಚರ್ಯಕರವಾಗಿ ತಿಳಿಸಿ ಮುಕ್ತವಾಗಿ ಮಾತನಾಡಿದ ಮೊದಲ ಹುಡುಗಿ. ಸದಾ ಕಾಲ ಆತ್ಮೀಯತೆ, ಹೊಂದಾಣಿಕೆ, ಬದುಕಿನ ಹೋರಾಟಗಳ ಬಗ್ಗೆ ಹೆಚ್ಚು ಕ್ರೀಡಾ ಮನೋಭಾವದಿಂದ ಮಾತನಾಡುತ್ತಾ ಸದಾ ಕಾಲ ಯಾರಿಗೂ ಕೇರ್ ಮಾಡದೇ ನನ್ನ ಜೊತೆಯಲ್ಲಿಯೇ ಇರುತ್ತಿದ್ದುದು. ಮಾತನಾಡುತ್ತಿದ್ದುದು ನನಗೇ ಸಾಕಷ್ಟು ಸಂಕೋಚವಾಗುತ್ತಿತ್ತು. ಆದರೆ ಅವಳು ನನ್ನ ಹಿಂದೆ ಬಾಲ. ಆದರೆ ಅವಳ ಯಜಮಾನರು ತುಂಬಾ ಸಹೃದಯ ವ್ಯಕ್ತಿ. ದಿನವೂ ಅವಳನ್ನು ಆಫೀಸ್ ಹತ್ರ ಬಿಡುವುದು ಮತ್ತು ಸಂಜೆ ಕರೆದುಕೊಂಡು ಹೋಗಲು ಬರುತ್ತಿದ್ದರು. ಯಾವಾಗಲೂ ನಾನು ಅವಳ ಜೊತೆ ಇರುತ್ತಿದ್ದ ನನಗೇ ಮುಜುಗರ. ಕೆಲವು ಸಲ ಎಂ ಜಿ ರಸ್ತೆಯಿಂದ ಸಿಟಿ ಮಾರ್ಕೆಟ್ ತನಕ ರಸ್ತೆಯಲ್ಲಿ ಕಡಲೇ ಕಾಯಿ ಬೀಜ ತಿನ್ನುತ್ತಾ ನಡೆದುಕೊಂಡು ಹೋಗುತ್ತಿದ್ದೆವು. ಅವರ ಯಜಮಾನರು ಅದೇ ರಸ್ತೆಯಲ್ಲಿ ಬಂದು ಮಾರ್ಗ ಮಧ್ಯದಲ್ಲಿ ಬಂದು ಕರೆದುಕೊಂಡು ಹೋಗುತ್ತಿದ್ದರು. ಒಂದು ದಿನ ರಜ ಇತ್ತು. ನನಗೆ ಬಿಂಧು ಅವರ ಯಜಮಾನರು ರಸ್ತೆಯಲ್ಲಿ ಸಿಕ್ಕಿದರು. ರಮೇಶ್, ನಿನ್ನ ಹತ್ರ ಸ್ವಲ್ಪ ಮಾತಾಡಬೇಕು ಅಂದರು. ನನಗೆ ಮೀಟರ್ ಆಫ್. ಅವರು ಮಾತನಾಡಿದ್ದು ಇಷ್ಟೇ. ಬಿಂಧು ಸಾಧಾರಣವಾಗಿ ಯಾರನ್ನೂ ಇಷ್ಟಪಡುವುದಿಲ್ಲ. ಅವಳಿಗೆ ತುಂಬಾ ಕ್ಲೋಸ್ ಫ್ರೆಂಡ್ಸ್ ಯಾರು ಇಲ್ಲ. ಅವಳು ಏನು ಅಂತ ನನಗೆ ಚೆನ್ನಾಗಿ ಗೊತ್ತು. ಅವಳು ನಿಮ್ಮನ್ನು ಮಾತ್ರ ಕ್ಲೋಸ್ ಫ್ರೆಂಡ್ ಅಂತ ಸ್ವೀಕರಿಸಿದ್ದಾಳೆ. ನನಗೆ ತುಂಬಾ ಖುಷಿ. ನೀವು ನಮ್ಮ ಮನಗೆ ಬರಬೇಕು. ನೀವು ನನಗೂ ಆಪ್ತ ಸ್ನೇಹಿತರು ಅಂತ. ತಬ್ಬಿಬ್ಬಾದೆ. ಬಿಂಧು ನನಗೆ ಕೊಟ್ಟ ಹಿತವಚನ ನಾನೆಂದು ಮರೆಯಲು ಸಾಧ್ಯವೇ ಇಲ್ಲ. ರಮೇಶ್, ನೀನು ಸಿಕ್ಕಾಪಟ್ಟೆ ಬುದ್ದಿವಂತ ಕಣೋ. ನೀನು ಒಂದೆರಡು ವರ್ಷ ಅಮೇರಿಕ ದೇಶದಲ್ಲಿ ಕೆಲಸ ಮಾಡಿ ಬಾ. ಅಲ್ಲಿ ನನ್ನ ತಮ್ಮ ಇದ್ಧಾನೆ, ಕೆಲವು ಸಂಬಂಧಿಕರು ಇದ್ದಾರೆ. ನಾನು ನಿನಗೆ ಎಲ್ಲ ಸಹಾಯ ಮಾಡುತ್ತೇನೆ. ನೀನು ಹೋಗಿ ಒಂದಷ್ಟು ಚೆನ್ನಾಗಿ ದುಡಿದು ವಾಪಸ್ ಬಾ. ಗೋಲಿ ಹೊಡ್ಯೋ ಈ ಕೆಲಸ ಅಂತ. ನನಗಂತೂ ಮೀಟರ್ ಇರಲಿಲ್ಲ. ಸರಿ ನನಗೆ ಆ ಕಂಪನಿಯಲ್ಲಿ ಆಗ ಚೆನ್ನೈಗೆ ಹೋಗಬೇಕು ಎಂದರು. ಬೆಂಗಳೂರು ಆಫೀಸ್ ಕ್ಲೋಸ್ ಅಂದರು. ನಾನು ನನ್ನ ರಾಜೀನಾಮೆ ಕೊಟ್ಟೆ. ನಾನು ಬಂದು ಬಿಂಧು ಹತ್ರ ಹೇಳಿದೆ. ನನ್ನ ಹಿಂದೆಯೇ ತನ್ನ ರಾಜೀನಾಮೆ ಬರೆದು ಕೊಟ್ಟು, ನನ್ನ ಕಡೆಯ ಕೆಲಸದ ದಿನವೇ ಆಕೆಯೂ ತನ್ನ ಕಡೆಯ ಕೆಲಸದ ದಿನವಾಗಿ ಮಾಡಿಕೊಂಡಳು. ಅಪರೂಪಕ್ಕೆ ಆಗೊಮ್ಮೆ ಈಗೊಮ್ಮೆ ಸಂಪರ್ಕದಲ್ಲಿ ಇದ್ದಳು. ಎಷ್ಟೋ ವರ್ಷಗಳ ನಂತರ ಒಂದು ಕರೆ ಬಂತು. ಕನ್ನಡ ಸಿನಿಮಾ ನೋಡದ ಅವಳು ಮುಂಗಾರು ಮಳೆ ಚಿತ್ರ ನೋಡಿದ್ದಳು. ರಮೇಶ್, ನಾನು ಒಂದು ಕನ್ನಡ ಫಿಲಂ ನೋಡಿದೆ ಕಣೋ. ಮುಂಗಾರು ಮಳೆ. ತುಂಬಾ ಇಷ್ಟ ಆಯಿತು. ಅವನೇನೋ ಹೀರೋ ಗಣೇಶ್ ನಿನ್ನ ತರಹಾನೇ ಮಾತಾಡ್ತಾನೆ. ಇಡೀ ಫಿಲಂ ನೋಡ್ತಾ ನೀನೇ ಜ್ಞಾಪಕ ಆದೇ ಗುರು ಅಂದಳು. ಜೀವನದ ಸತ್ಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ಕ್ರಿಶ್ಚಿಯನ್ ಹುಡುಗಿ ! ಆ ಹುಡುಗಿ ನನ್ನ ಜೀವನ ಚರಿತ್ರೆ ಬರೆದ ಲೇಖಕಿಗೆ ಕೊಟ್ಟ ಅಭಿಪ್ರಾಯ ಹೀಗಿದೆ. Bindu Shibu John, an ex-colleague of Ramesh at Amco, considers him to be a very good friend. She had an opportunity to guide him in regard to fundamental relationship with parents, spouse and brothers. Of course, he in turn was her guide to sort out issues relating to her in-laws. She finds him very down to earth, genuine, and sincere. She will forever miss him as a friend who accompanied her everyday while walking down from the Amco office on MG Road to City Market, in the evenings, munching peanuts and discussing everything under the sun.
Posted on: Fri, 01 Aug 2014 10:33:38 +0000

Trending Topics



Recently Viewed Topics




© 2015