ಡಿಸೆಂಬರ್ 13, 2014ರಂದು - TopicsExpress



          

ಡಿಸೆಂಬರ್ 13, 2014ರಂದು ಅಪ್ಲೋಡ್ ಮಾಡಿದ 10 ಪ್ರಶ್ನೆಗಳು (ಉತ್ತರದ ಸಂಕೇತದೊಂದಿಗೆ). ನಮ್ಮ ಉತ್ತರಗಳೊಂದಿಗೆ ನಿಮ್ಮ ಉತ್ತರಗಳನ್ನು ಹೋಲಿಸಿ ನೋಡಿ. ನಿಮ್ಮ ಅಂಕಗಳು 10ಕ್ಕೆ 10 ಅಥವಾ... 1. 10 ಕೋಟಿ ರೂ. ವೆಚ್ಚದಲ್ಲಿ ಸಾಫ್ಟ್ ಸಿಲ್ಕ್ ಘಟಕ ಕೆಳಕಂಡ ಯಾವ ನಗರದಲ್ಲಿ ಸ್ಥಾಪನೆಯಾಗಲಿದೆ? A. ದೊಡ್ಡಬಳ್ಳಾಪುರ B. ರಾಮನಗರ C. ಚನ್ನಪಟ್ಟಣ ● D. ದೇವನಹಳ್ಳಿ ¤¤¤¤ 2. ಕೆಳಕಂಡ ಯಾವ ಎರಡು ದೇಶಗಳ ನಡುವೆ ಈಚೆಗೆ 13,000 ಕಿ.ಮೀ. ಅಂತರದ ಸರಕು ರೈಲು ಸೇವೆ ಆರಂಭವಾಯಿತು? A. ಚೀನಾ - ಅಮೆರಿಕಾ B. ಚೀನಾ - ಫ್ರಾನ್ಸ್ C. ಚೀನಾ - ಜರ್ಮನಿ D. ಚೀನಾ - ಸ್ಪೇನ್ ● ¤¤¤¤ 3. ಚೀನಾದಿಂದ ಹೊರಡುವ ಸರಕು ರೈಲು 13,056 ಕಿ.ಮೀ. ದೂರ ಕ್ರಮಿಸಲು ಎಷ್ಟು ದಿನ ತೆಗೆದುಕೊಳ್ಳುತ್ತದೆ? A. 13ದಿನ B. 18ದಿನ C. 22ದಿನ ● D. 26ದಿನ ¤¤¤¤ 4. ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಯಾವ ನಗರದಲ್ಲಿರುವ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ? A. ಹುಬ್ಬಳ್ಳಿ B. ದಾವಣಗೆರೆ C. ಚಿತ್ರದುರ್ಗ ● D. ತುಮಕೂರು ¤¤¤¤ 5. ರಾಜ್ಯ ಯೋಜನಾ ಮಂಡಳಿಗೆ ಎಷ್ಟು ಜನ ಸದಸ್ಯರನ್ನು ನೇಮಕ ಮಾಡಲಾಗಿದೆ? A. 5 B. 6 C. 7 ● D. 8 ¤¤¤¤ 6. 1 ರೀಮ್ ಎಂದರೆ ಎಷ್ಟು ದಸ್ತುಗಳು? A. 10 B. 12 C. 20 ● D. 24 ¤¤¤¤ 7. CORRESPONDING ಶಬ್ದದಿಂದ ಕೆಳಕಂಡ ಯಾವ ಶಬ್ದವನ್ನು ರಚಿಸಬಹುದು? A. DISCERN ● B. RESPONSE C. REPENT D. CORRECT ¤¤¤¤ 8. ಕೆಳಕಂಡ ಸರಣಿಯಲ್ಲಿ ತಪ್ಪು ಸಂಖ್ಯೆಯನ್ನು ಗುರುತಿಸಿ. 5, 16, 6, 16, 7, 16, 9 A. 9 ● B. 7 C. 6 D. ಮೇಲ್ಕಂಡವುಗಳಲ್ಲಿ ಯಾವುದೂ ಅಲ್ಲ. ವಿವರಣೆ: 5-16, 6-16, 7-16, ಎಲ್ಲವೂ ಜೋಡಿಗಳು. ಆದರೆ 9 ಮಾತ್ರ ಇಲ್ಲಿ ಏಕಾಂಗಿಯಾಗಿದೆ. ¤¤¤¤ 9. ಕೆಳಕಂಡವುಗಳಲ್ಲಿ ಯಾವ ಚೆಂಡಿನ ವ್ಯಾಸ ಅತಿ ಹೆಚ್ಚು ಇರುತ್ತದೆ? A. ಟೆನಿಸ್ ಬಾಲ್ B. ಸ್ಕ್ವಾಶ್ ಬಾಲ್ C. ಗೋಲ್ಫ್ ಬಾಲ್ D. ಕ್ರಿಕೆಟ್ ಬಾಲ್ ● ¤¤¤¤ 10. ಕೆಳಕಂಡ ಶಬ್ದಗಳನ್ನು ಶಬ್ದ ಕೋಶದ ಪ್ರಕಾರ ಕ್ರಮವಾಗಿ ಬರೆಯಿರಿ. A. Inbabit B. Ingenious C. Inherit D. Influence E. Infatuation ಉತ್ತರ: AEDBC. ¤¤¤¤ ಮೇಲ್ಕಂಡ 10 ಪ್ರಶ್ನೆಗಳು ನಿಮಗೆ ಉಪಯುಕ್ತ ಎನಿಸಿದ್ದಲ್ಲಿ ಈ ಪೋಸ್ಟ್ನ್ನು ಅವಶ್ಯವಾಗಿ Share ಮಾಡಿ. ಬೇರೆಯವರು ಕೂಡ ನಮ್ಮ ಗ್ರೂಪಿನ ಲಾಭ ಪಡೆದುಕೊಳ್ಳಲಿ. ಗ್ರೂಪ್ ಲಿಂಕ್: https://facebook/groups/samanyajananagk/ ¤¤¤¤
Posted on: Sat, 13 Dec 2014 11:42:24 +0000

Trending Topics



Recently Viewed Topics




© 2015