ತುರ್ತು ಚಿಕಿತ್ಸೆ - TopicsExpress



          

ತುರ್ತು ಚಿಕಿತ್ಸೆ ಅನಿವಾರ್ಯತೆ ಎದುರಿಸುತ್ತಿದ್ದ ಎರಡು ಮಕ್ಕಳು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನರಳಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಮೂರೂವರೆ ವರ್ಷದ ಪುಟಾಣಿ ಆಕಾಶ್ ನಿನ್ನೆ ಮಧ್ಯಾಹ್ನ ಆಟವಾಡುವಾಗ ಆಯತಪ್ಪಿ ಬಿದ್ದು ತಲೆಗೆ ಪೆಟ್ಟಾಗಿತ್ತು. ಕೂಡಲೇ ಮಗುವಿನ ಪೋಷಕರು ಆಕಾಶ್ ನನ್ನ ನಿಮಾನ್ಸ್ ಗೆ ಕರೆತಂದಿದ್ದಾರೆ. ಮಧ್ಯಾಹ್ನದಿಂದ ರಾತ್ರಿ 11.30ರವರೆಗೂ ಚಿಕಿತ್ಸೆ ನೀಡೋ ವಿಚಾರದಲ್ಲಿ ಸತಾಯಿಸಿದ ಸಿಬ್ಬಂದಿ ಅಂತಿಮವಾಗಿ, ವೆಂಟಿಲೇಟರ್ ಅಗತ್ಯವಿದೆ. ಆದ್ರೆ ನಮ್ಮಲ್ಲಿ ಯಾವುದೂ ಖಾಲಿ ಇಲ್ಲಾ ಹಾಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಿರಿ ಅಂತಾ ಕೈ ಚೆಲ್ಲಿದ್ದಾರೆ. ಇಲ್ಲಿಂದ ಆಕಾಶ್ ನನ್ನು ಇಂದಿರಾಗಾಂಧಿ ಆಸ್ಪತ್ರೆಗೆ ಕರೆತರಲಾಗಿದೆ. ಆದ್ರೆ, ಇಲ್ಲೂ ಕೂಡಾ ವ್ಯವಸ್ಥೆ ಖಾಲಿ ಇಲ್ಲಾ ಅನ್ನೋ ಉತ್ತರ. ಅಂತಿಮವಾಗಿ ವಾಣಿ ವಿಲಾಸಕ್ಕೆ ಮಗುವನ್ನು ಕರೆತರಲಾಗಿದೆ. ಆದ್ರೆ, ಇಲ್ಲೂ ವೈದ್ಯರು ವೆಂಟಿಲೇಟರ್ ಖಾಲಿ ಇಲ್ಲಾ ಅನ್ನೋ ಉತ್ತರ ನೀಡಿದ್ದಲ್ಲದೆ, ಖಾಸಗಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಡಿಸೋ ಭರವಸೆ ನೀಡಿದ್ದಾರೆ. ಆದ್ರೆ, ಅಂತಿಮವಾಗಿ ಮಾಧ್ಯಮಗಳು ಮಧ್ಯ ಪ್ರವೇಶಿಸುತ್ತಿದ್ದಂತೆ ಮಗುವಿಗೆ ವೆಂಟಿಲೇಟರ್ ನೀಡಲಾಗಿದೆ. …....................... ಇನ್ನೊಂದೆಡೆ, ದೇವನಹಳ್ಳಿಯ 8 ವರ್ಷದ ಆನಂದ್ ಪಿಟ್ಸ್ ನಿಂದಾಗಿ ಬಳಲಿ ರಾತ್ರಿ ನಿಮಾನ್ಸ್ ಸೇರಿದ್ದ. ಆದ್ರೆ, ಮಗುವಿಗೆ ವೆಂಟಿಲೇಟರ್ ಅಗತ್ಯವಿದೆ ಅನ್ನೋದನ್ನೂ ತಿಳಿಸದೆ, ತಡ ರಾತ್ರಿವರೆಗೂ ಸುಮ್ಮನಿದ್ದ ಸಿಬ್ಬಂದಿ ಅಂತಿಮವಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅಂತಾ ಕಥೆ ಹೇಳಿದ್ದಾರೆ. ಇಲ್ಲೂ ಆಷ್ಟೇ ಮಗುವನ್ನ, ಇಂಧಿರಾಗಾಂಧಿ, ವಾಣಿ ವಿಲಾಸ್ ಹಾಗೂ ಬೌರಿಂಗ್ ಆಸ್ಪತ್ರೆಗಳಿಗೆ ಸೌಲಭ್ಯಕ್ಕಾಗಿ ಸುತ್ತಿಸಲಾಗಿದೆ. ಅಂತಿಮವಾಗಿ ವಾಣಿ ವಾಲಾಸ್ ಗೆ ಆಗಮಿಸಿದ ಮಗುವಿನ ಚಿಕಿತ್ಸೆ ವರದಿಯನ್ನ ಓದೋದಕ್ಕೇ ಇಲ್ಲಿನ ವೈದ್ಯರು ಬರೋಬ್ಬರಿ 15 ನಿಮಿಷ ತೆಗೆದುಕೊಂಡಿದ್ದಾರೆ. ಸಾಲದ್ದಕ್ಕೆ, ವೆಂಟಿಲೇಟರ್ ಇಲ್ಲಾ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅಂತಾ ಸಲಹೆ ನೀಡಿದ್ದಾನೆ.
Posted on: Wed, 10 Dec 2014 10:14:12 +0000

Trending Topics



Recently Viewed Topics




© 2015