ದಾರಿ ತಪ್ಪೋದು ನನಗೆ - TopicsExpress



          

ದಾರಿ ತಪ್ಪೋದು ನನಗೆ ಮಾಮೂಲಿಯಾಗಿಬಿಟ್ಟಿದೆ. ಅಷ್ಟು ಚಿಕ್ಕ ತೀರ್ಥಳ್ಳಿಯಲ್ಲಿ ಮನೆಯಿಂದ ತುಂಗಾ ನದಿಗೆ ಹೋಗುವ ದಾರಿ ತಪ್ಪುತ್ತಿದ್ದೆ. ಮನೆಗೆ ಬಂದ ನೆಂಟರನ್ನ ಊರಿಡೀ ಸುತ್ತಾಡಿಸಿಬಿಟ್ಟಿದ್ದೆ. ತವರು ಮನೆಯಿಂದ ಅದು ಬರೀ ಹನ್ನೊಂದು ಕಿ.ಮೀ ದೂರದ ಹಳ್ಳಿ. ಒಬ್ಬಳೇ ಬಸ್ ಹತ್ತಿದಾಗೆಲ್ಲ ಇಳಿದಿದ್ದು ಒಂದೋ ಹಿಂದಿನ ಹಳ್ಳೀಲಿ, ಇಲ್ಲಾ ಮುಂದಿನ ಹಳ್ಳೀಲಿ! ಕೋಲ್ಕೊತಾದಲ್ಲಿ, ಗುಜರಾತಿನಲ್ಲಿ, ಕರ್ನಾಲಿನಲ್ಲಿ, ಜಮ್ಮುವಿನಲ್ಲಿ, ಕೊನೆಗೆ ಲಡಾಖಿನಲ್ಲೂ ಕಳೆದುಹೋಗಿದ್ದೆ, ದಾರಿ ತಪ್ಪಿ. ಇನ್ನಿಪ್ಪತ್ತು ದಿನಕ್ಕೆ ಜೀವಿತಾವಧಿಯ ಅರ್ಧ ಆಯಸ್ಸು ಕಳೆಯುತ್ತೆ. ತಿರುಗಿ ನೋಡಿದರೆ - ಅರೆ! ಎಷ್ಟೆಲ್ಲ ದಾರಿ ತಪ್ಪಿ ಬಂದಿದ್ದೀನಿ!! ಸಧ್ಯ! ತಪ್ಪು ದಾರಿಯಲ್ಲಿ ಬಂದಿಲ್ಲ. ಇವೆರಡಕ್ಕೂ ಅದೆಷ್ಟು ವ್ಯತ್ಯಾಸವಿದೆ ಅಲ್ವ? (ಇವತ್ತು Military memorial ಗೆ ಹೋಗೋ ಬದಲು war memorialಗೆ ಹೋಗಿ ತಲುಪಿದ್ದೆ...!)
Posted on: Sat, 26 Jul 2014 17:28:16 +0000

Trending Topics



Recently Viewed Topics




© 2015