ನಿಜವಾಗ್ಲು ಚೆನ್ನಾಗಿದೆ - TopicsExpress



          

ನಿಜವಾಗ್ಲು ಚೆನ್ನಾಗಿದೆ ನೀವು ಒಂದ ಸಲ ಓದಿ… 8 ಹುಡುಗಿಯರು ಒಂದು ಸಾಲಿನಲ್ಲಿ ರೇಸಿಂಗ್ ಗೆ ನಿಂತಿರುತ್ತಾರೆ. ರೇಡಿ ! ಸ್ಟೇಡಿ ! ಓಡಿ ! ಬಂದೂಕಿನ ಒಂದು ಶಬ್ದ ಕಿವಿಗೆ ಬಿದ್ದ ಕ್ಷಣ ಎಲ್ಲರು ಓಡಲು ಪ್ರಾರಂಬಿಸಿದರು. ಕಷ್ಟ ಪಡುತ್ತಾ ಅವರು ತುಂಬಾ ಮುಂದೆ ಸಾಗಿದರು, ಒಂದು ಹುಡುಗಿ ಕಾಲು ಜಾರಿ ಕೆಳಗೆ ಬಿದ್ದಳು. ತುಂಬ ನೋವಿನಿಂದಾಗಿ ಅವಳು ಅಳಲು ಶುರು ಮಾಡಿದಳು. ಯಾವಾಗ ಆ 7 ಹುಡುಗಿಯರಿಗೆ ಅವಳ ಅಳು ಕೇಳಿಸಿತೋ ಆಗ ಎಲ್ಲರೂ ಓಡುವುದನ್ನ ನಿಲ್ಲಿಸಿದರು… ಗಾಬರಿಯಿಂದ ನಿಂತರು, ಹಿಂದೆ ತಿರುಗಿ ನೋಡಿ ಅವಳ ಬಳಿಗೆ ಓಡೋಡಿ ಬಂದರು. ಆ 7 ಹುಡುಗಿಯರು ಅವರ ಕೈಗಳನ್ನು ಜೋಡಿಸಿ ಆಕೆಯನ್ನ ಎತ್ತಿಕೊಂಡು ಗೆಲುವಿನ ಘಟ್ಟಕ್ಕೆ ಬಂದು ಸೇರಿದರು. ಇದನ್ನೆಲ್ಲ ನೋಡುತ್ತಿದ್ದ ಜನರು ದಿಘ್ಬ್ರಮೆಗೊಂಡರು. ಹಲವು ಕಣ್ಣಗಳು ನೀರಿನಿಂದ ತುಂಬಿದವು. ಈ ರೇಸ್ ನ National Institute of Mental Health ನಲ್ಲಿ ಪ್ರಾಯೋಜಿಸಿದ್ದರು. ಅಲ್ಲಿ ಭಾಗವಹಿಸಿದವರೆಲ್ಲರು ಮಾನಸಿಕ ರೋಗಿಗಳು. ಅಲ್ಲಿ ಅವರಿಗೆ ಎನನ್ನ ಕಲಿಸಲಾಗಿತ್ತು? ಸಹಕಾರ ( Teamwork), ಮಾನವೀಯತೇ (Humanity), ಆಟಗಾರನ ಉತ್ಸಾಹ (Sportsman spirit), ಪ್ರೀತಿ (Love), ಕಾಳಜಿ ( Care), ಮತ್ತು ಸಮಾನತೆ (Equality)… ನಾವು ಖಂಡಿತವಾಗಿ ಹೀಗೆ ಮಾಡುವುದಿಲ್ಲ, ಯಾಕಂದರೇ… ನಮಗೆ ಮೆದುಳಿದೆ… ನಮಗೆ ಅಹಂ (Ego) ಇದೆ… ನಮಗೆ ದಿಟ್ಟತನ (Attitude) ವಿದೆ ಪ್ರೀತಿಯನ್ನು ಮನಸಿನಿಂದ ಮಾಡಿ ಮೆಲ್ನೋಟಕ್ಕೆ ಬೇಡ ತಪ್ಪು ಮಾಡದ ಮನಸಿಲ್ಲ, ಪ್ರತಿ ತಪ್ಪು ಮಾಡಿದ ಮನಸ್ಸನ್ನು ಕ್ಷಮಿಸಲಾಗದಿರದಂತಹ ಕಾರಣಗಳಿಲ್ಲ ಮನಸು ಚೆನ್ನಾಗಿದ್ದರೆ ಯಾವುದು ತಪ್ಪೇ ಅಲ್ಲ. -ಈ ಮನಸು (ದಯಾನಂದ್)
Posted on: Tue, 28 Oct 2014 15:00:34 +0000

Trending Topics



Recently Viewed Topics




© 2015