ಫೇಸ್ಬುಕ್ ಅಲ್ಲಿ ಒಬ್ಬ - TopicsExpress



          

ಫೇಸ್ಬುಕ್ ಅಲ್ಲಿ ಒಬ್ಬ ಹುಡುಗ ಒಬ್ಬಳು ಹುಡುಗಿ ಯಾವುದೊ ಒಂದು ಪೋಸ್ಟ್ ಅಲ್ಲಿ ಸಿಕ್ಕಿದರು . ಮೊದಮೊದಲು ಲೈಕ್ , ನಂತರ ಕಾಮೆಂಟ್ ಆದನಂತರ ಕಾಮೆಂಟ್ಸ್ ಅಲ್ಲಿಯೇ ಚಾಟ್ ಮಾಡುತಿದ್ದರು . ನಗುತ್ತ , ಜೋಕ್ಸ್ ಮಾಡುತ್ತ ದಿನ ಹೋದಂತೆ ಹತ್ತಿರ ಆಗುತಿದ್ದರು . ತದನಂತರ ಹುಡುಗಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದಳು . ಹುಡುಗ ಅಸೆಫ್ಟ್ ಮಾಡಿದ. ಅದೇ ಖುಷಿಲಿ ಅವರು ಚಾಟ್ ಮಾಡಲು ಪ್ರಾರಂಬಿಸಿದರು. ಬೆಳಿಗ್ಗೆ ಸಂಜೆ ಯಾವಾಗಲು ನೆನಪು ಮಾಡಿಕೊಳ್ಳುತಿದ್ದರು . ಬೆಳಿಗ್ಗೆ ಗುಡ್ ಮಾರ್ನಿಂಗ್ ರಾತ್ರಿ ಮಲಗೋ ಮುಂಚೆ ಗುಡ್ ನೈಟ್ ಹೇಳೋದು ಮರೆಯುತಿರಲಿಲ್ಲ . ಅವರು ದಿನವಿಡೀ ಮೆಸೇಜ್ ಗೋಸ್ಕರ ವೇಟ್ ಮಾಡುದು. ಮೆಸೇಜ್ ಓದಿ ಮನಸಲ್ಲೇ ನಗುವುದು ಒಬ್ಬೊಬ್ಬರೇ ಹೀಗೆ ದಿನಕಳೆದಂತೆ ಅವರಿಬ್ಬರ ನಡುವೆ ಪ್ರೀತಿ ಬೆಳೆಯಲು ಶುರು ಆಯಿತು . ಇಬ್ಬರು ಇಷ್ಟ ಪಟ್ಟು ತಮ್ಮ ಭಾವನೆ ಹೇಳಿಕೊಂಡು ಪ್ರೀತಿ ಮಾಡಲು ಶುರು ಮಾಡಿದರು . ಹೀಗೆ ಕೆಲವು ಸಮಯ ಖುಷಿಲಿ ಕಳೆಯಿತು . ಹುಡುಗಿಗೆ ತುಂಬಾ ಬಾಯ್ ಫ್ರೆಂಡ್ಸ್ ಇದ್ರು. ಅವರಿಗೆ ಅವಳು ಬೇರೆಯವರನ್ನು ಪ್ರೀತಿ ಮಾಡೋದು ಇಷ್ಟ ಇರಲಿಲ್ಲ . ಅವರು ಅವಳ ಜೊತೆ ಫ್ಲರ್ಟ್ ಮಾಡುತಿದ್ದರು .. ಅವಳು ಅವರ ಜೊತೆ ಹಾಗೆ ಇದ್ದಳು ಟೈಮ್ ಪಾಸ್ ಮಾಡುತ್ತ ಈ ವಿಷ್ಯ ಹುಡುಗನಿಗೆ ಗೊತ್ತಿರಲಿಲ್ಲ ಅವನು ತುಂಬಾ ಮುಗ್ಧ ಹುಡುಗನಾಗಿದ್ದ ಅವನು ಅವಳನ್ನು ಬಿಟ್ಟು ಯಾರಲ್ಲೂ ಚಾಟ್ ಮಾಡುತಿರಲಿಲ್ಲ. ಒಂದಿನ ಒಬ್ಬ ಫ್ರೆಂಡ್ ಅವಳ ಲವ್ ಬಗ್ಗೆ ತಿಳಿದು ಏನಾದರೂ ಮಾಡಿ ಅವರ ಲವ್ ನಿಲ್ಲಿಸಬೇಕೆಂದು ಅವಳಲ್ಲಿ ಬಂದು ನೀನು ಲವ್ ಮಾಡುತಿರುವ ಹುಡುಗ ಸರಿ ಇಲ್ಲ ಅವನು ಕೆಟ್ಟ ಹುಡುಗ ಅನ್ನುತ್ತಾನೆ. ಆದರೆ ಅವಳು ನಂಬೋದಿಲ್ಲ .. ಅವರ ಪ್ರೀತಿ ಮುಂದುವರೆಯುತ್ತೆ. ಆದರೆ ಆ ಹುಡುಗಿ ಆ ದಿನದಿಂದ ಹುಡುಗನನ್ನು ಅನುಮಾನದಿಂದ ನೋಡಲು ಪ್ರಾರಂಬಿಸಿದಳು. ಹೋಗುತ್ತಾ ಹೋಗುತ್ತಾ ಜಗಳ ಆಡಲು, ಇಷ್ಟ ಇಲ್ಲದ ಹಾಗೆ ಮಾಡಲು ಪ್ರಾರಂಬಿಸಿದಳು . ಫೇಸ್ಬುಕ್ ಅಲ್ಲಿ ಅವನ ಜೊತೆ ಚಾಟ್ ಮಾಡುದು ಕಡಿಮೆ ಮಾಡಿ ತನ್ನ ಬಾಯ್ ಫ್ರೆಂಡ್ಸ್ ಜೊತೆ ಮಾಡಲು ಪ್ರಾರಂಬಿಸಿದಳು . ಹುಡುಗ ತುಂಬಾನೇ ಹೇಳಿದ ನಿಜವಾಗಿ ಪ್ರೀತಿ ಮಾಡುತಿದ್ದೇನೆ , ಹೀಗೆ ಮಾಡಬೇಡ , ನಿನ್ನ ನಂಬಿದೆನೆ.. ಮೋಸ ಮಾಡಬೇಡ .. ಬೇರೆ ಬಾಯ್ಸ್ ಫ್ರೆಂಡ್ಶಿಪ್ ಬಿಟ್ಟುಬಿಡು ಅಂತ ಗೊಗರೆದುಕೊಂಡ ಆದರೆ ಹುಡುಗಿ ಕೇಳಲೇ ಇಲ್ಲ .. ಅವನ ಜೊತೆ ಪ್ರೀತಿ ಎಂಬ ಆಟ ಅಡಿ ಟೈಮ್ ಪಾಸ್ ಮಾಡಿದವಳ ಹಾಗೆ ಮಾಡಿದಳು ...ಅವನನ್ನು ದೂರ ಮಾಡಿದಳು .. ಬೇರೆ ಬಾಯ್ಸ್ ಜೊತೆ ಹತ್ತಿರವಾಗಿ ಚಾಟ್ ಮಾಡಲು ಪ್ರಾರಂಬಿಸಿದಳು... ಅವಳು ಮೊದಲು ಪ್ರೀತಿ ಮಾಡಿದ ಹುಡುಗನನ್ನು ಬ್ಲಾಕ್ ಮಾಡಿದಳು.. ಅದನ್ನು ನೋಡಿ ಹುಡುಗನ ಹ್ರದಯ ಒಡೆದು ಹೋಯಿತು... ಹುಡುಗ ಕೊರಗುತ್ತ ದಿನದಿನ ಕೊನೆಗೆ ಫೇಸ್ಬುಕ್ ಉಪಯೋಗಿಸುದನ್ನೇ ಬಿಟ್ಟುಬಿಟ್ಟ..... ತುಂಬ ಸಮಯದ ನಂತರ ಹುಡುಗಿ ಎಲ್ಲರಲ್ಲೂ ಮೋಸ ಹೋಗಿ ಅವನ ನೆನಪು ಮಾಡಿಕೊಂಡಳು .. ಆ ಹುಡುಗನನ್ನು ಹುಡುಕಲು ಪ್ರಯತ್ನಿಸಿದಳು.. ಹುಡುಕುತ್ತಾನೆ ಇದ್ದಳು..... ಕೆಲವು ಕಥೆ ಹೀಗೂ ಇರುತ್ತವೆ ಮುಗಿಯದೆ........ ನೀತಿ : ಜೀವನದಲ್ಲಿ ಯಾರನ್ನಾದರೂ ಕಳೆದುಕೊಂಡ ಮೇಲೇನೆ ಅವರ ಬೆಲೆ ತಿಳಿಯುವುದು ಅರ್ಥ ಆಗುವುದು ....
Posted on: Mon, 23 Sep 2013 04:55:18 +0000

Trending Topics



Recently Viewed Topics




© 2015