ಫ್ರಾನ್ಸ್ ರಾಜಧಾನಿ - TopicsExpress



          

ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ಐಎಸ್ಐಎಸ್ ಉಗ್ರರ ದಾಳಿ ಪ್ರಕರಣದಿಂದ ತಡವಾಗಿ ಎಚ್ಚೆತ್ತುಕೊಂಡ ಫ್ರಾನ್ಸ್ ಸರ್ಕಾರ ಇರಾಕ್ನಲ್ಲಿರೋ ಐಸಿಸ್ ನೆಲೆಗಳ ಮೇಲೆ ವಾಯುದಾಳಿ ನಡೆಸಲು ನಿರ್ಧರಿಸಿದೆ. ಇರಾಕ್ ಹಾಗೂ ಸಿರಿಯಾ ಗಡಿಗೆ ಹೊಂದಿಕೊಂಡಂತಿರೋ ಪ್ರದೇಶಗಳಲ್ಲಿ ಅಡಗುದಾಣಗಳನ್ನು ನಿರ್ಮಿಸಿರೋ ಐಸಿಸ್ ಉಗ್ರರ ನೆಲೆಗಳ ಮೇಲೆ ಅಮೆರಿಕಾ ಈಗಾಗಲೇ ವಾಯು ದಾಳಿ ನಡೆಸುತ್ತಿದೆ. ಇದೀಗ ಇತ್ತೀಚೆಗೆ ಫ್ರಾನ್ಸ್ ಚಾರ್ಲಿ ಹೆಬ್ಡೋ ಪತ್ರಿಕೆಯ ಮೇಲಿನ ದಾಳಿಯಲ್ಲಿ 12 ಮಂದಿ ಹಾಗೂ ಬಳಿಕ ಸೂಪರ್ ಮಾರ್ಕೆಟ್ ಮೇಲಿನ ದಾಳಿಗೆ ಐವರು ಸಾವನ್ನಪ್ಪಿದ್ದರು. ಹೀಗಾಗಿ ಒಟ್ಟು 17 ಮಂದಿಯ ಸಾವಿಗೆ ಕಾರಣವಾಗಿದ್ದ ಐಸಿಸ್ ವಿರುದ್ಧ ಫ್ರಾನ್ಸ್ ಸಮರ ಸಾರಿದೆ. --------------- ಈ ಮಧ್ಯೆ ಮೊನ್ನೆ ಚಾರ್ಲಿ ಹೆಬ್ಡೋ ಪತ್ರಿಕೆಯ ಕಚೇರಿ ಮೇಲೆ ದಾಳಿ ನಡೆಸೋ ಮುನ್ನ ಕೌಚಿ ಸಹೋದರರು ರಸ್ತೆಯಲ್ಲಿ ರಾಜಾರೋಷವಾಗಿ ಗನ್ಗಳಿಗೆ ಬುಲೆಟ್ಗಳನ್ನು ಲೋಡ್ ಮಾಡೋ ಮತ್ತಷ್ಟು ದೃಶ್ಯಾವಳಿಗಳು ಬಹಿರಂಗಗೊಂಡಿವೆ. ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸೋಕೆ ಅಂತಾ ಕಪ್ಪು ಬಣ್ಣದ ಕಾರಿನಲ್ಲಿ ಬಂದಿದ್ದ ಸಯಿದ್ ಹಾಗೂ ಚೆರೀಫ್ ಕೌಚಿ, ಕಾರಿಂದ ಇಳಿದ ಬಳಿಕ ಮೆಶಿನ್ ಗನ್ಗೆ ಬುಲೆಟ್ಗಳನ್ನು ಅಲ್ಲೇ ಲೋಡ್ ಮಾಡಿದ್ದಾರೆ. ಬಳಿಕ ಮುಂದೆ ಹೋಗ್ತಿದ್ದಂತೆ ಅಡ್ಡಗಟ್ಟಿದ ಪೊಲೀಸ್ ವಾಹನದ ಮೇಲೆ ಯದ್ವಾತದ್ವಾ ಗುಂಡು ಹಾರಿಸೋ ದೃಶ್ಯವನ್ನು ಪಕ್ಕದ ಕಟ್ಟಡದಲ್ಲಿದ್ದವರು ಸೆರೆ ಹಿಡಿದಿದ್ದಾರೆ.
Posted on: Wed, 14 Jan 2015 05:22:03 +0000

Trending Topics



Recently Viewed Topics




© 2015