ಬೆಡಗಿನ ಇಂಗ್ಲೀಷ್ ಬಟ್ಟೆ - TopicsExpress



          

ಬೆಡಗಿನ ಇಂಗ್ಲೀಷ್ ಬಟ್ಟೆ ತೊಟ್ಟ ನನ್ನ ಕವನ no 2. :) ತಾಯಿ ಮತ್ತು ಮಗಳಿಗೆ ********************** ಸೀತೆ ನಿನ್ನ ಮಗಳೆ? ನಿಜ ಹೇಳೆ ಭೂಮಿ ಹೌದೆ! ಹಾಗಾದರೆ ನೀನೇಕೆ ಕಲಿಸಲಿಲ್ಲ ಅವಳಿಗೆ ತಪ್ಪಿಲ್ಲದಾಗ ಸಿಡಿಯುವುದನ್ನು ಎದೆಯ ಮೇಲೆ ನಿಂತು ನೋಯಿಸುವವರ ಎದೆ ನಡುಗಿಸುವುದನ್ನು ಇಡೀ ಜೀವಮಾನದಲಿ ಎಂದಾದರೂ ವರ್ತಿಸಿದಳೆ ಆಕೆ ನಿನ್ನಂತೆ? ಇಲ್ಲಾ ನಿನ್ನುದರದಲಿ ಜನಿಸಿದ ದುರ್ಬಲ ಶಿಶುವೆ ಸೀತೆ; ನಿನ್ನ ಮಗಳೆ? * ಜಗತ್ತು ಬಲ್ಲ ನಿನ್ನ ಕತೆಯನ್ನು ಹೇಳಲು ನಾನಿಲ್ಲಿ ಕುಳಿತಿಲ್ಲ ಸೀತೆ ನಿನ್ನನ್ನೆ ಕೇಳಬೇಕಿದೆ ಪ್ರಶ್ನೆಗಳು ಹಲವಾರು ಎಲ್ಲ ಬೇಡ ಉತ್ತರಿಸು ಈ ಕೆಲವಕ್ಕಾದರೂ ಹೆಣ್ಣುಗಳೆಲ್ಲ ಇರಬೇಕು ಸೀತೆಯಂತೆ ಎಂದಾಗಲೆಲ್ಲ ಕೈ ಕಾಲು ಕಟ್ಟಿ ಹಾಕಿದ ಅನುಭವ ಹೇಗಿದ್ದೆ ಸೀತೆ ನೀನು? ......... ಭಾವನೆಗಳಿಲ್ಲದ ಕಲ್ಲಿನಂತೆ? ಎಲ್ಲದಕ್ಕೂ ಕತ್ತಾಡಿಸುವ ಕೋಲೆ ಬಸವನಂತೆ? ಹೆಚ್ಚು ನಕ್ಕರೆ ಮಾತಾಡಬೇಕಾದೀತು ಮಾತಾಡಿದರೆ ಪ್ರಶ್ನೆಗಳೆದ್ದಾವು ಎಂಬ ಹೆದರುಪುಕ್ಕಿಯಂತೆ? ಅಥವಾ ನಿನ್ನದೆಂಬ ಆಸೆಗಳ ಕೊಂದುಕೊಂಡು.... ಯಾಕೆ ಹಾಗಿದ್ದೆ ಸೀತೆ? ಹೇಗಿದ್ದೆ ನೀನು??.... - ಜಯಲಕ್ಷ್ಮೀ ಪಾಟೀಲ್. Not her mother’s daughter ******************************** Why is Seetha not Chip off the old block? Born in the womb of you, The mother earth.. Why is she unlike you? Doesn’t explore, Doesn’t explode.. Is she a weakling? Why is she not Her mother’s daughter? Seetha, The world knows you Inside out.. Yet the questions unearth, But with the answers Buried deep within.. In the womb of Mother earth. How did you do, Seetha.. How could you.. Be stone-faced? Did you do an “Yes Minister”? Did you wag the tail? Were you different.. Or indifferent? Did you chicken-out? Why did you stay put? Why stand the test.. What on earth for, Seetha? -ಇಂಗ್ಲೀಷಿಗೆ; ಮನೋಹರ್ ನಾಯಕ್ Manohar Nayak
Posted on: Tue, 05 Aug 2014 05:59:06 +0000

Trending Topics



Recently Viewed Topics




© 2015