ಬೆಳಗ್ಗೆ ಒಬ್ಬ ಹುಡುಗ ಕೆಲಸ - TopicsExpress



          

ಬೆಳಗ್ಗೆ ಒಬ್ಬ ಹುಡುಗ ಕೆಲಸ ಕೇಳಿಕೊ೦ಡು ಬoದಿದ್ದ.....ಯಾಕೆ ಇನ್ನು ಪಿ ಯು ಸಿ ಓದುವ ವಯಸ್ಸಲ್ಲೇ ನಿನಗೆ ಕೆಲಸದ ಅವಶ್ಯಕತೆ ಎ೦ದರೆ....ನನ್ನ ತ೦ದೆ ತೀರಿ ಕೊ೦ಡರು ಹಾಗಾಗಿ ಎ೦ದ. ನಿಮ್ಮ ತ೦ದೆ ಏನು ಕೆಲಸ ಮಾಡುತ್ತಿದ್ದರು ಎ೦ದೆ. ನಗರ ಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎ೦ದ...ಹಾಗಾದರೆ ಅವರ ಕೆಲಸ ನಿನಗೆ ಸಿಗುತ್ತದಲ್ಲವೆ??..ಇಲ್ಲ ಅವರು ಗುತ್ತಿಗೆ ಆಧಾರದ ಮೇಲೆ ಇದ್ದರು...ಇನ್ನು ೨ ತಿ೦ಗಳು ಕಳೆದಿದ್ದರೆ ಅವರ ನೌಕರಿ ಖಾಯ೦ ಆಗುವುದರಲ್ಲಿ ಇತ್ತು, ಗುತ್ತಿಗೆ ಆಧಾರದಲ್ಲಿ ಇದ್ದಿದ್ದರಿ೦ದ ಅವರ ಕೆಲಸವೂ ಸಿಗಲ್ಲ..ಖಾಯ೦ ಆದವರಿಗೆ ಸಿಗುವ ಪೆನ್ಷನ್ ಕೂಡ ಸಿಗುವುದಿಲ್ಲ ಎ೦ದು ಹೇಳುವಾಗ ಅವನ ಮುಖ ಬಾಡಿ ಹೋಗಿತ್ತು....ಹೋಗಲಿ ಏನಾದರೂ ಜಮೀನು ತೋಟ ಇದೆಯಾ ಎ೦ದದ್ದಕ್ಕೆ ಉತ್ತರ ಇಲ್ಲ ಎ೦ದು ತಲೆ ಆಡಿಸಿದ...ನನಗೆ ಏನು ಹೇಳ ಬೇಕೆ೦ದು ತಿಳಿಯಲಿಲ್ಲ.....ಮನೆಯಲ್ಲಿ ತಾಯಿ ಮತ್ತು ತ೦ಗಿ ಇದ್ದಾರೆ ಈಗ ನಾನು ಕೆಲಸ ಮಾಡಲೇ ಬೇಕಿದೆ ಎ೦ದು ದೃಡ ನಿರ್ಧಾರ ಮಾತ್ರ ಅವನದಾಗಿತ್ತು. ಹಾಗೇ ಯೋಚಿಸುತ್ತಾ ಅವನ ಮತ್ತು ಅವನ ಪರಿವಾರದ ನಾಳಿನ ಭದ್ರತೆ ಬಗ್ಗೆ ಯೋಚಿಸಿದರೆ ಸದ್ಯದ ಪರಿಸ್ಥಿತಿಯಲ್ಲಿ ಏನೂ ಹೊಳೆಯಲಿಲ್ಲ.....ಒ೦ದು ಧೀರ್ಗ ನಿಟ್ಟುಸಿರು ಬಿಟ್ಟು ಮತ್ತೆ ಫೇಸ್ ಬುಕ್ಕಿನೆಡೆ ಕಣ್ಣು ಹಾಯಿಸಿದೆ....ನಟ ಕಲಿಯುಗದ ಕರ್ಣ ಅ೦ಬರೀಶ ಸಾಹೇಬರಿಗೆ ಬರೋಬ್ಬರಿ ಕೋಟಿ ಹಣ ರೂಪಾಯಿಯ ವೈದ್ಯಕೀಯ ಚಿಕಿತ್ಸೆಗೆ ಸರಕಾರ ಮ೦ಜೂರು ಮಾಡಿದೆ ಎ೦ಬ ನ್ಯೂಸ್ ಓದಿ ಮತ್ತೊಮ್ಮೆ ಧೀರ್ಗ ನಿಟ್ಟುಸಿರು ಬಿಟ್ಟೆ.........ಸದ್ಯಕ್ಕೆ ಮು೦ದಿನ ತಿ೦ಗಳಲ್ಲಿ ಅವನಿಗೊ೦ದು ಕೆಲಸದ ಏರ್ಪಾಟು ಮಾಡುವ ಬಗ್ಗೆ ಯೋಚಿಸುತ್ತಿದ್ದೇನೆ.
Posted on: Thu, 17 Jul 2014 12:19:26 +0000

Trending Topics



Recently Viewed Topics




© 2015