ಬ್ಯಾಂಕ್ ಕೆಲಸ ಇದ್ರೆ ಇಂದೇ - TopicsExpress



          

ಬ್ಯಾಂಕ್ ಕೆಲಸ ಇದ್ರೆ ಇಂದೇ ಮಗಿಸಿಕೊಳ್ಳಿ Normal banking operations in public sector banks across the country are likely to be hit on Wednesday, November 12 as employees have decided to go on one-day nation-wide strike to press for wage revision. ಬ್ಯಾಂಕ್‌ನಲ್ಲಿ ಕೆಲಸಗಳಿದ್ದರೆ ಮಂಗಳವಾರವೇ ಮುಗಿಸಿಕೊಂಡು ಬಿಡಿ. ನ.12ರ ಬುಧವಾರ ವೇತನ ಪರಿಷ್ಕರಣೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರ್ವಜನಿಕ ವಲಯದ ಬ್ಯಾಂಕ್‌ ಉದ್ಯೋಗಿಗಳು ಒಂದು ದಿನದ ಮುಷ್ಕರ ನಡೆಸಲಿದ್ದಾರೆ. ಬುಧವಾರ ಸಾರ್ವಜನಿಕ ವಲಯದ ಬ್ಯಾಂಕ್‌ ಉದ್ಯೋಗಿಗಳು ಒಂದು ದಿನದ ಮುಷ್ಕರ ನಡೆಸಲಿದ್ದಾರೆ. ಆದ್ದರಿಂದ ನ.12ರ ಬುಧವಾರ ದೇಶಾದ್ಯಂತ ಬ್ಯಾಂಕ್ ಸೇವೆ ಸ್ಥಗಿತಗೊಳ್ಳಲಿದೆ. ಮಷ್ಕರ ನಿರತರೊಂದಿಗೆ ಸೋಮವಾರ ನಡೆದ ಸಂಧಾನ ಸಭೆಯೂ ವಿಫಲಗೊಂಡಿದೆ. ವೇತನ ಪರಿಷ್ಕರಣೆಕ್ಕೆ ಸಂಬಂಧಿಸಿದಂತೆ ಸೋಮವಾರ ಬ್ಯಾಂಕ್ ನೌಕರರ ಒಕ್ಕೂಟಗಳೊಂದಿಗೆ ನಡೆಸಿದ ಸಭೆ ವಿಫಲವಾಗಿದೆ. ಶೇ.25ರಷ್ಟು ವೇತನ ಪರಿಷ್ಕರಣೆ ಬದಲು ಶೇ.23ರಷ್ಟು ಪರಿಷ್ಕರಿಸಿ ಎಂದು ನೌಕರರ ಒಕ್ಕೂಟ ಬೇಡಿಕೆ ಇಟ್ಟಿದೆ. [ನ.12ರಂದು ಬ್ಯಾಂಕ್ ಮುಷ್ಕರ] ಆದರೆ, ಸರ್ಕಾರಿ ಅಧೀನದ ಭಾರತೀಯ ಬ್ಯಾಂಕ್‌ ಸಂಘ ಕೇವಲ ಶೇ.11 ವೇತನ ಪರಿಷ್ಕರಣೆ ಮಾಡುವುದಾಗಿ ಹಿಂದಿನ ನಿರ್ಧಾರಕ್ಕೆ ಅಂಟಿಕೊಂಡಿದ್ದು, ಸೋಮವಾರದ ನಡೆದ ಸಂಧಾನ ಸಭೆ ವಿಫಲವಾಗಲು ಕಾರಣವಾಗಿದೆ. ಆದ್ದರಿಂದ ನಿಗದಿಯಂತೆ ಬುಧವಾರ ಮುಷ್ಕರ ನಡೆಯಲಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಸಂಚಾಲಕ ವಸಂತ ರೈ ಅವರು, ವೇತನ ಪರಿಷ್ಕರಣೆಗೊಳಿಸುವಂತೆ ನಾವು ಹಲವು ಬಾರಿ ಮುಷ್ಕರ ನಡೆಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಬುಧವಾರ ಮೊದಲ ಹಂತದ ಮುಷ್ಕರ ನಡೆಯಲಿದ್ದು ನಂತರ ಡಿ.2 ರಿಂದ 5ರವರೆಗೆ ವಲಯವಾರು ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.
Posted on: Tue, 11 Nov 2014 05:30:41 +0000

Trending Topics



Recently Viewed Topics




© 2015