"ಭಾಗ್ ಮಿಲ್ಖಾ ಭಾಗ್" ಸಿನಿಮಾ - TopicsExpress



          

"ಭಾಗ್ ಮಿಲ್ಖಾ ಭಾಗ್" ಸಿನಿಮಾ ತುಂಬಾ ಚೆನ್ನಾಗಿದೆ. ಚಿಕ್ಕ ಮಕ್ಕಳಿಂದ ಮುದುಕರ ವರೆಗೆ ಎಲ್ಲಾ ವಯಸ್ಸಿನವರು ನೋಡೋ ಸಿನಿಮಾ.. ನಮ್ಮ ದೇಶದ ಒಬ್ಬ ಮಹಾನ್ ಸಾಧಕನ ಜೀವನದ ಸ್ಪೂರ್ತಿಯಿಂದ ಮಾಡಿದ ಆ ಸಿನಿಮಾ ಭಾರತದ ಮೂಲೆಮೂಲೆಗೆ ತಲುಪಬೇಕು... ಲಗಾನ್, ಚಕ್ ದೇ ಇಂಡಿಯಾ, ರಂಗ್ ದೇ ಬಸಂತಿ, ತ್ರೀ ಈಡಿಯಟ್ಸ್, ಲಗೇ ರಹೋ ಮುನ್ನಾಭಾಯ್, ಪೀಪ್ಲಿ ಲೈವ್, ಪಾನ್ ಸಿಂಗ್ ತೋಮರ್, ಓ ಮೈ ಗಾಡ್, ತಾರೆ ಜಮೀನ್ ಪರ್ ಮತ್ತು ಇವತ್ತಿನ ಭಾಗ್ ಮಿಲ್ಖಾ ಭಾಗ್ ಹಾಗೂ ಇತ್ಯಾದಿ., ಇಂಥಹ ಸದಭಿರುಚಿಯ ಸಿನಿಮಾಗಳನ್ನ ನಮ್ಮ ತಂದೆ ತಾಯಿ ಅಕ್ಕ ಬಾವ ಮಕ್ಕಳಿಗೆ ತೋರಿಸೋಣ ಅಂದರೆ ಅವರಿಗೆ ಹಿಂದಿ ಭಾಷೆ ಬರಲ್ಲ.. ಆದರೆ ಕರ್ನಾಟಕದಲ್ಲಿ ಡಬ್ಬಿಂಗ್ ಗೆ ಅವಕಾಶವಿಲ್ಲ.. ಕೆಟ್ಟ ಸಿನಿಮಾಗಳು ಡಬ್ಬಿಂಗ್ ಆಗುವುದು ಬೇಡ, ಒಳ್ಳೆ ಸಿನಿಮಾಗಳಿಗಾದರೂ ಅವಕಾಶವಿದ್ದಿದ್ದರೆ...? ಎಂಥಾ ದುರಾದೃಷ್ಟ ರೀ ನಮ್ಮದು..!!? -virus
Posted on: Wed, 17 Jul 2013 20:48:43 +0000

Trending Topics



Recently Viewed Topics




© 2015