ಯರ್ರಾಬಿರ್ರಿ ಮಳೆ ಹೂದು... - TopicsExpress



          

ಯರ್ರಾಬಿರ್ರಿ ಮಳೆ ಹೂದು... ನನ್ನೂರು ಸಕಲೆಶಪುರದಾಗ ಕಣ್ಣು ಬಿಟ್ಟಲೆಲ್ಲ ಕಾಣೋ ಬೆಟ್ಟಗುಡ್ಡದಾಗ ಹಸಿರಿಗೆ ಇನ್ನಷ್ಟು ಮೆರಗುಬಂದಿತ್ತು. ಎಲ್ಲಿನೋಡಿದರಲ್ಲಿ ಜರಿಗಳು ಮೈತುಂಬಿ ಹರಿಯುತಿದ್ದವು. ಬಂಡೆಗಳ ಸಂದಿಯಲ್ಲಿ ನೊರೆನೀರು ಉಕ್ಕುಕ್ಕಿ ಹರಿತಿತ್ತು. ಬೆಂಗಳೂರಿಂದ AlHeen SakhFath, Anil Padighatte G, Jinde Suryabhanu, Anusha Vanjre (ಪುಟಾಣಿ) Triveni TC ಚಿತ್ರದುರ್ಗದಿಂದ ಜಯಪ್ರಕಾಶ್. ಇ. ಅವರನ್ನು ಮಳೆಗಾಲದ ಮಲೆನಾಡ ನೋಡಿ ನಲಿಯಲು ಕರೆದೆ... ಬಂದರು. ಸಕಲೇಶಪುರದ ಗೆಳೆಯರಾದ ಅಣ್ಣಾಬಾಂಡ್....ಅಣ್ಣಪ್ಪ ಮತ್ತು ಪತ್ರಕರ್ತ ಮಿತ್ರ..ಕೃಷಿಕ ಸ.ಸು. ವಿಶ್ವನಾಥ್ ಜತೆಗೂಡಿಕೊಂಡರು. ಸುಮಾರು 48 ಗಂಟೆಗಳ ಕಾಲ ತಾಲ್ಲೂಕಿನ ಕಸಬಾ, ಹೆತ್ತೂರು, ಹಾನಬಾಳು ಹೋಬಳಿಗಳಲ್ಲಿ ಬೀಳೋ ಮಳೆಯಲ್ಲಿ ನೆನೆಯುತ್ತಾ...ಕೊರೆವ ಚಳಿಯಲ್ಲಿ ನಡುಗುತ್ತಾ...ಕವುಚಿಕೊಳ್ಳುವ ಇಬ್ಬನಿ ಕಂಡು ಬೆರಗಾಗುತ್ತ..ಹರಿವ ನದಿ..ತೊರೆ-ಜರಿ ನೀರ ಬೊಗಸೆಯಲ್ಲಿ ಹಿಡಿದು ಕುಡಿಯುತ್ತ...ಮುಂಗಾರು ಮಳೆಯಲ್ಲಿ ಗದ್ದೆ ನಾಟಿಮಾಡುವುದು ಕಂಡಾಗ ಕೆಸರ ಗದ್ದೆಗಿಳಿದು ಭತ್ತದ ಸಸಿ ನಾಟಿ ಮಾಡಿ...ಮರಹೊಡೆದು..ಹಣ್ಣು ಹಂಪಲು ಕಣ್ಣಿಗೆ ಬಿದ್ದರೆ ಬೇಲಿ ಹಾರಿ ಕಿತ್ತು ತಿಂದು ...ಹಸಿವಾದಾಗ ಆಸುಪಾಸಿನ ಪರಿಚಿತರ ಮನೆಯಲ್ಲಿ ಮಳೆಗಾಲದಲ್ಲಿ ಸೊಗಸಾಗಿರುವ ಬಿದಿರು ಕಳಲೆ..ನಾಟಿ ಕೆಸದ ಗಂಟಿನ ಪಲ್ಯೆ..ಮೀನಿನ ತತ್ತಿ...ಅಕ್ಕಿ ಕಡುಬು..ಅಕ್ಕಿ ರೊಟ್ಟಿ..ನಾಟಿಕೋಳಿ ಯಸ್ರು..ಸಾವಿಗೆ ಹಾಲು ಹಿಂಗೆ ಏನೆನು ಸಿಗುತ್ತೋ ಅದನ್ನ ತಿಂದುಕೊಂಡೆ ಎರಡು ದಿನಗಳನ್ನು ಕಳೆದು ಬಂದೆವು. ( ಮಳೆಯಲ್ಲಿ ಒದ್ದೆಯಾಗಿ ಚಳಿಯಲ್ಲಿ ನಡುಗಿದ ಮೇಲೆ ನೆಗಡಿ..ಜ್ವರ ಎಲ್ಲಾದರೂ ಬಂದೀತು ಎಂದು ಕತ್ತಲಾದ ಮೇಲೆ ಎರೆಡೆರಡು ಟೀ ಸ್ಪೂನ್ ಕಷಾಯ ಕುಡಿದೆವು...)
Posted on: Tue, 13 Aug 2013 07:13:04 +0000

Trending Topics



Recently Viewed Topics




© 2015