ರು.100 ಕೋಟಿ ಒಡೆಯನಾದ ಅಂಬಾರಿ - TopicsExpress



          

ರು.100 ಕೋಟಿ ಒಡೆಯನಾದ ಅಂಬಾರಿ ಅರ್ಜುನ್! ನಿರ್ದೇಶಕ ಎ.ಪಿ.ಅರ್ಜುನ್ ಗೊತ್ತಲ್ಲಾ? ಸ್ಟಾರ್ ಗಳಿಲ್ಲದೇ ಅಂಬಾರಿಯಂತಹ ಅಮರ ಪ್ರೇಮಕಾವ್ಯಯನ್ನು ತೆರೆಮೇಲೆ ಕಲಾತ್ಮಕವಾಗಿ ತೋರಿಸಿ ಸೈ ಎನಿಸಿಕೊಂಡಿದ್ದ ನಿರ್ದೇಶಕ. ಸರ್ಜಾ ಕುಟುಂಬದ ಕುಡಿ ಧ್ರುವ ಸರ್ಜಾರನ್ನ ಅದ್ದೂರಿಯಾಗಿ ಸ್ಯಾಂಡಲ್ ವುಡ್ ಗೆ ಪರಿಚಯಿಸಿದ್ದೂ ಇದೇ ಅರ್ಜುನ್. ಇದೀಗ ಹೊಸ ಮುಖಗಳೊಂದಿಗೆ ರಾಟೆ ಸಿನಿಮಾ ಮಾಡುತ್ತಿರುವ ಅರ್ಜುನ್, ಬಹುಬೇಗ ಚಾಲೆಂಜಿಂಗ್ ಸ್ಟಾರ್ ಕಾಲ್ ಶೀಟ್ ಹಿಡಿದು ಐರಾವತ ಏರಿದ್ದಾರೆ. [ಹುಟ್ಟುಹಬ್ಬದ ದಿನ ಐರಾವತ ಏರಲಿರುವ ದರ್ಶನ್] ದಿನಗಳೆದಂತೆ ಅದೃಷ್ಟ ಖುಲಾಯಿಸುತ್ತಿರುವ ಎ.ಪಿ.ಅರ್ಜುನ್ ಈಗ ನೂರು ಕೋಟಿ ಒಡೆಯ! ಹಾಗಂತ ನಾವು ಹೇಳ್ತಿಲ್ಲ. ಅರ್ಜುನ್ ಕ್ಲಿಕ್ ಮಾಡಿಸಿಕೊಂಡಿರುವ ಈ ಫೋಟೋನೇ ಸಾರಿ ಸಾರಿ ಹೇಳ್ತಿದೆ, ಬೇಕಾದ್ರೆ ನೀವೇ ನೋಡಿ. ರು. 1000 ನೋಟುಗಳಿರುವ ಕಂತೆಗಳ ಮುಂದೆ ಕೂತು ಅರ್ಜುನ್ ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ. ಒಮ್ಮೆಲೆ ಈ ಫೋಟೋವನ್ನ ನೋಡಿದವರು, ಅಬ್ಬಾ! ಇಷ್ಟೊಂದು ದುಡ್ಡಾ!? ಅಂತ ಕಣ್ಣರಳಿಸುವುದು ಸಹಜ. ಹಾಗೆ ನೋಡಿದರೆ, ಅರ್ಜುನ್ ಗಿಂತ ದುಡ್ಡೇ ಹೈಲೈಟ್ ಆಗಿರುವ ಈ ಫೋಟೋದಲ್ಲಿ ಅಂದಾಜು ಎಷ್ಟು ದುಡ್ಡಿರಬಹುದು? ಅಂದ್ರೆ ಅರ್ಜುನ್ ಕೊಟ್ಟ ಉತ್ತರ ಬರೋಬ್ಬರಿ ರು. 100 ಕೋಟಿ! ಕಡೆಗೂ ಅರ್ಜುನ್ ಹೊಡೆದ್ರಲ್ಲಾ ಚಾನ್ಸು! ಅಂತ ಹೇಳುವ ಮುನ್ನ ಅದರ ಹಿಂದಿದ್ದ ರೀಲ್ ಕಹಾನಿಯನ್ನ ಫಿಲ್ಮಿಬೀಟ್ ಕನ್ನಡ ಗೆ ಅರ್ಜುನ್ ಬಿಚ್ಚಿಟ್ಟರು. ಪೋಟೋದಲ್ಲಿ ಕಾಣುವು 1000 ರೂಪಾಯಿ ನೋಟುಗಳು ಅಸಲಿಯಲ್ಲ, ನಕಲಿ! ಐರಾವತ ಸಿನಿಮಾಗಾಗಿ ಇಷ್ಟು ದೊಡ್ಡ ಮೊತ್ತದ ನಕಲಿ ನೋಟುಗಳನ್ನು ಪ್ರಿಂಟ್ ಮಾಡಿಸಲಾಗಿದ್ಯಂತೆ. ಐರಾವತ ಚಿತ್ರದ ಬಹುಮುಖ್ಯ ಸೀನ್ ಇದು. ಚಿತ್ರಕ್ಕೆ ದೊಡ್ಡ ತಿರುವು ಸಿಗುವುದೇ ಈ ಹಣದಿಂದ. ಇದಕ್ಕಾಗಿ, ಕೋಟಿಗಟ್ಟಲೆ ನಕಲಿ ನೋಟುಗಳನ್ನ ಪ್ರಿಂಟ್ ಮಾಡಿಸಿ ಮೈಸೂರಿನಲ್ಲೂ ಶೂಟ್ ಮಾಡಿದ್ದೀವಿ ಅಂತ ಫಿಲ್ಮಿಬೀಟ್ ಕನ್ನಡಗೆ ಅರ್ಜುನ್ ತಿಳಿಸಿದರು. ಈ ಬಗ್ಗೆ ಫೇಸ್ ಬುಕ್ ನಲ್ಲಿ ದುಡ್ಡಿನಿಂದ ಯಶಸ್ಸು ಸಿಗುವುದಿಲ್ಲ ಅಂತ ಸ್ಟೇಟಸ್ ಕೂಡ ಹಾಕಿಕೊಂಡಿದ್ದಾರೆ ಅರ್ಜುನ್. ಚಾಲೆಂಜಿಂಗ್ ಸ್ಟಾರ್ ಖಾಕಿ ಧರಿಸಿ ಐರಾವತ ಚಿತ್ರದಲ್ಲಿ ಮಿಂಚಲಿದ್ದಾರೆ. ಸಮಾಜದಲ್ಲಿನ ಅವ್ಯವಸ್ಥೆಯ ವಿರುದ್ಧ ಹೋರಾಡೋ ದಕ್ಷ ಪೊಲೀಸ್ ಅಧಿಕಾರಿಯ ಪಾತ್ರ ದರ್ಶನ್ ರದ್ದು. ಇಂತದ್ರಲ್ಲಿ ಕೋಟಿ ಕೋಟಿ ಕಂತೆಗಳ ಮ್ಯಾಟರ್ ಇದೆ ಅಂದ್ರೆ, ಅದು ಬ್ಲಾಕ್ ಮನಿಯೋ, ಇಲ್ಲಾ ಸ್ವಿಜ್ ಬ್ಯಾಂಕ್ ನದ್ದೋ ಅನ್ನೋದನ್ನ ಅರ್ಜುನ್ ಬಿಟ್ಟುಕೊಡಲಿಲ್ಲ. ಚಿತ್ರಕಥೆ ಮತ್ತು ಅರ್ಜುನ್ ಫೇಸ್ ಬುಕ್ ಸ್ಟೇಟಸ್ ನ ತಳುಕು ಹಾಕಿ ನೋಡಿದರೆ, ಐರಾವತ ಸಮಾಜಕ್ಕೆ ಉತ್ತಮ ಸಂದೇಶ ನೀಡುವುದು ಖಚಿತ. ಅದನ್ನ ತೆರೆಮೇಲೆ ನೋಡಿ ತಿಳಿದುಕೊಳ್ಳುವುದಕ್ಕೆ ಸಮಯ ಇನ್ನೂ ಸಾಕಷ್ಟಿದೆ. Regards from (ಫಿಲ್ಮಿಬೀಟ್ ಕನ್ನಡ)
Posted on: Sat, 22 Nov 2014 06:50:33 +0000

Trending Topics



Recently Viewed Topics




© 2015