ಶ್ರೀನಾಥ್ ರಾಯಸಂ - - TopicsExpress



          

ಶ್ರೀನಾಥ್ ರಾಯಸಂ - ವಿಜ್ಞಾನಯಜ್ಞ - 52 Digital Camera ಮತ್ತು Mobile camera ಹಿಂದಿನ ವಿಜ್ಞಾನವೇನು ? ಇತ್ತೀಚೆಗಿನ ದಿನಗಳಲ್ಲಿ ಎಲ್ಲರೂ ಡಿಜಿಟಲ್ ಕ್ಯಾಮೆರಾಗಳನ್ನು ಮತ್ತು ಮೊಬೈಲ್ ಕ್ಯಾಮೆರಾಗಳನ್ನು ಬಳಸುವುದು ಸಾಮನ್ಯವಾಗಿಬಿಟ್ಟಿದೆ, ಮತ್ತು ಹಳೆಯ ಫಿಲ್ಮ್ ಉಪಯೋಗಿಸಿ ಫೋಟೋ ತೆಗೆಯುವ ಕ್ಯಾಮೆರಾಗಳು ಮೂಲೆಗುಂಪಾಗಿವೆ. ಹಾಗೆ ನೋಡಿದರೆ ಈ ಕ್ಯಾಮೆರಾಗಳು ನಮ್ಮ ದೈನಂದಿನ ಬದುಕನ್ನೇ ಬದಲಾಯಿಸಿಬಿಟ್ಟಿವೆ. ಇವುಗಳ ಮೂಲಕ ನಾವು ಫೋಟೋಗಳನ್ನು ಈಮೇಲ್ , Whatapp, MMS, ಇತ್ಯಾದಿಗಳ ಮೂಲಕ ಪರಸ್ಪರ ಒಂದು ಕ್ಷಣದಲ್ಲಿ ರವಾನೆ ಮಾಡಬಲ್ಲವರಾಗಿದೇವೆ ! ಡಿಜಿಟಲ್ ಕ್ಯಾಮೆರಾಗಳು ಒಂದು ಚಿತ್ರವನ್ನು ಸೊನ್ನೆ ಮತ್ತು ಒಂದು ಇರುವ (0-1) ಸಂಖ್ಯಾಸರಪಳಿಯನ್ನಾಗಿ ಬದಲಾಯಿಸುತ್ತದೆ. ಒಂದೊಂದು ಇಂಥ ಚಿಕ್ಕ ಚೌಕಕ್ಕೆ Pixel ಎಂದು ಕರೆಯುತ್ತಾರೆ. ಒಂದು ಡಿಜಿಟಲ್ ಕ್ಯಾಮೆರಾದಿಂದ ಫೋಟೋ ತೆಗೆಯುವಾಗ ಮುಂಭಾಗದಲ್ಲಿನ ಮಸೂರದ ಮುಂದಿನ ಶಟರ್ ತೆರೆದುಕೊಳ್ಳುತ್ತದೆ. ಆಗ ನಾವು ತೆಗೆಯಬೇಕಗಿರುವ ವಸ್ತುವಿನ ಮೇಲೆ ಬೆಳಕು ಪ್ರತಿಫಲಿಸಿ ಕ್ಯಾಮೆರಾದ ಮಸೂರದ ಮೂಲಕ ಕ್ಯಾಮೆರಾವನ್ನು ಪ್ರವೇಶಿಸುತ್ತದೆ. ಹಳೆಯ ಫಿಲ್ಮ್ ಕ್ಯಾಮೆರಾದಲ್ಲೂ ಇದೇ ಪ್ರಕ್ರಿಯೆ ನಡೆಯುತ್ತದೆ, ಆದರೆ ಅಲ್ಲಿ ಪ್ರತಿಫಲಿತ ಬೆಳಕು ಚಿತ್ರವಾಗಿ ಒಂದು ರಾಸಾಯನಿಕಗಳಿಂದ ಲೇಪಿಸಲ್ಪಟ್ಟಿರುವ ಫಿಲ್ಮ್ ಮೇಲೆ ಬಿದ್ದು ಅಲ್ಲಿ ರಾಸಾಯನಿಕ ಪ್ರಕ್ರಿಯೆ ಉಂಟು ಮಾಡಿ ಚಿತ್ರ ಮೂಡುವಂತೆ ಮಾಡುತ್ತದೆ ಆದರೆ ಡಿಜಿಟಲ್ ಕ್ಯಾಮೆರಾದಲ್ಲಿ ಸ್ವಲ್ಪ ಭಿನ್ನವಾಗಿರುತ್ತದೆ. ಡಿಜಿಟಲ್ ಕ್ಯಾಮೆರಾದಲ್ಲಿ ಫಿಲ್ಮ್ ಇರುವುದಿಲ್ಲ , ಬದಲಿಗೆ ಒಳಗೆ ಒಂದು ಸೆನ್ಸಾರ್ ಇರುತ್ತದೆ. ಅದು ಹೊರಗಿನಿಂದ ಬರುವ ಬೆಳಕಿನ ಚಿತ್ರಗಳನ್ನು ವಿದ್ಯುತ್ ಸಹ್ನೆಗಳನ್ನಾಗಿ ( Electrical Signals ) ಪರಿವರ್ತಿಸುತ್ತದೆ. ಇದನ್ನು Charge Coupled Device ( CCD ) ಅನ್ನುತ್ತಾರೆ. ಈ Charge Coupled Device ( CCD ) ಮಾಡುವ ಕೆಲಸವೆಂದರೆ ಒಳಬಂದ ಬೆಳಕಿನ ಕಿರಣಗಳಿಂದ ಮೂಡಿದ ಚಿತ್ರವನ್ನು ಅತಿ ಚಿಕ್ಕ ಚೌಕಾಕಾರದ ತುಂಡುಗಳನ್ನಾಗಿ ವಿಭಾಜಿಸುತ್ತದೆ. ಈ ಪ್ರತಿಯೊಂದು ತುಂಡನ್ನು Pixel ಅನ್ನುತ್ತಾರೆ. ಈ ರೀತಿ ಬಂದ ಪ್ರತಿಯೊಂದು Pixelನ ತೀವ್ರತೆ ಮತ್ತು ಬಣ್ಣಗಳ ತೀಕ್ಷಣತೆಯನ್ನು ಈ ಸೆನ್ಸಾರ್ ಅಳೆದು ಅದನ್ನು ಸಂಖ್ಯಾಸರಪಳಿಯನ್ನಾಗಿ ( Binary Number Chain ) ಮಾಡಿ ಸಂಗ್ರಹ ಮಾಡುತ್ತದೆ. ! ಈ ಸಂಗ್ರಹದಲ್ಲಿ ಚಿತ್ರದ ಪ್ರತಿಯೊಂದು ವಿವರಗಳು ಅಂದರೆ ಯಾವ ಕೋನದಲ್ಲಿ ತೆಗೆದದ್ದು, ಅದರ ಬೆಳಕಿನ ಸಂಯೋಜನೆ, ಬಣ್ಣಗಳ ಹೊಂದಾಣಿಕೆ ಎಲ್ಲವೂ ಅತ್ಯಂತ ಸೂಕ್ಷ್ಮವಾಗಿ ಸಂಗ್ರಹಿಸಲ್ಪಡುತ್ತವೆ. ಇನ್ನೊಂದು ವಿಶೇಷ ಬದಲಾವಣೆಯಾಗುವುದು ಏನೆಂದರೆ ಇಂಥ ಚಿತ್ರಗಳಲ್ಲಿ ದೊಡ್ಡ ಸರಪಳಿಗಳು ಉಂಟಾಗುವುದರಿಂದ ಅವನ್ನು ಕಂಪ್ರೆಸ್ ಮಾಡುವುದು. ಇದರಿಂದ ಹೆಚ್ಚು ಸ್ಥಳವನ್ನು ಮಿಲಿಯನ್ ಗಳಷ್ಟು Pixelಗಳಷ್ಟು ಇರುವ ಒಂದೇ ಚಿತ್ರ ಆಕ್ರಮಿಸಿಬಿಟ್ಟರೆ ಡಿಜಿಟಲ್ ಕ್ಯಾಮೆರಾದ ಉಪಯುಕ್ತತೆ ಕಡಿಮೆಯಾಗುತ್ತದೆ. ಆದ್ದರಿಂದ ಚಿತ್ರಗಳನ್ನು JPG ( J-PEG = Joint Photographic Experts Group ) File ಗಳನ್ನಾಗಿ ಬದಲಾಯಿಸಿ ಸಂಗ್ರಹ ಮಾಡಿ ಇಟ್ಟುಕೊಳ್ಳುತ್ತದೆ. ಇದರಿಂದ ಕ್ಯಾಮೆರಾದಲ್ಲಿ ಬಹಳಷ್ಟು ಫೋಟೋಗಳನ್ನು ಶೇಖರಿಸಿ ಇಟ್ಟುಕೊಳ್ಳಬಹುದು. ಡಿಜಿಟಲ್ ಕ್ಯಾಮೆರಾಗಳ ಇನ್ನೊಂದು ಸೌಲಭ್ಯವೇನೆಂದರೆ ಫಿಲ್ಮ್ ಕ್ಯಾಮೆರಾಗಳಿಂದ ತೆಗೆದ ಚಿತ್ರಗಳನ್ನೂ Scan ಮಾಡಿ ಡಿಜಿಟಲ್ ಚಿತ್ರಗಳನ್ನಾಗಿ ಪರಿವರ್ತಿಸಬಹುದು.! ಒಂದು ಡಿಜಿಟಲ್ ಕ್ಯಾಮೆರಾದಲ್ಲಿ ಇರುವ ಭಾಗಗಳೆಂದರೆ ೧) Battery compartment, 2) Flash Capacitor, 3) Flash lamp , 4) self- timer ತೋರಿಸುವ ಒಂದು LED LAMP , 5) LENS , 6) Focussing mechanism 7) CCD Sensor, 8) USB connector,ಇದರಿಂದ ನಮ್ಮ ಕಂಪ್ಯೂಟರ್ ಗೆ ಕ್ಯಾಮೆರಾವನ್ನು ಜೋಡಿಸಬಹುದು. ೯) SD card ( secure Digital card ) - ಇದರಲ್ಲಿ ನಾವು ತೆಗೆದ ಚಿತ್ರ JPG FILE ಆಗಿ compress ಆಗಿ ಸಂಗ್ರಹವಾಗುತ್ತದೆ. ೧೦ ) ಕ್ಯಾಮೆರಾದ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸುವ Processor Chip , 11) ಪುನಃ ಚಿತ್ರವನ್ನು ಸ್ಕ್ರೀನ್ ಮೇಲೆ ಪ್ರದರ್ಶಿಸಲು LCD Display !
Posted on: Thu, 02 Oct 2014 02:47:09 +0000

Trending Topics



Recently Viewed Topics




© 2015