ಸಚಿನ್ ತೆಂಡುಲ್ಕರ್ ಬಗ್ಗೆ - TopicsExpress



          

ಸಚಿನ್ ತೆಂಡುಲ್ಕರ್ ಬಗ್ಗೆ ನಿನ್ನಿನ ನನ್ನ ಬರಹಕ್ಕೆ ಮೆಚ್ಚುಗೆಗಳು ವ್ಯಕ್ತವಾದಂತೆ, ಟೀಕೆಗಳೂ ಸಹಾ ಬಂದಿವೆ. ಟೀಕಾಕಾರರು ಕೇಳಿದ್ದಿಷ್ಟೆ ತೆಂಡುಲ್ಕರ್ ನನ್ನು ಟೀಕಿಸುವ ಯೋಗ್ಯತೆ ನಿಮಗಿದೆಯೆ? ನೀವು ಏನು ಸಾಧನೆ ಮಾಡಿದ್ದೀರಿ? ಹೌದು, ನಾನು ತೆಂಡುಲ್ಕರ್ ನಷ್ಟು ಯೋಗ್ಯತಾವಂತನಲ್ಲ, ಯಾವ ಸಾಧನೆಯನ್ನೂ ಮಾಡಿದವನಲ್ಲ. ಅದಕ್ಕೆ ನನ್ನ ಉತ್ತರವಿಷ್ಟೆ...ಸಾಧನೆ ಮಾಡಿದವರು, ಅವರು ರಾಜಕಾರಣಿ,ಆಟಗಾರ,ಸಿನೇಮಾ ನಟ ಯಾರೇ ಇರಲಿ, ತಮ್ಮಷ್ಟಕ್ಕೆ ತಾವು ಸಾಧನೆ ಮಾಡಿದರೆ? ಅವರ ಸಾಧನೆಯನ್ನು ಗುರುತಿಸುವವರು ಯಾರು? ಸಾಮಾನ್ಯ ಜನರಲ್ಲವೆ? ಜನರ ಹಾರೈಕೆ,ಬೆಂಬಲವಿಲ್ಲದೆ ಯಾರೂ ಬೆಳೆಯಲಾರರು. ಆದ್ದರಿಂದ ಜನಪ್ರಿಯ ವ್ಯಕ್ತಿ ವಿಮರ್ಷಾತೀತನಲ್ಲ. ಮೇಲೇರುವಾಗ ಜನಬೆಂಬಲ ಬಯಸುವವರು, ತಪ್ಪು ಮಾಡಿದಾಗ ಅದೇ ಜನ ಟೀಕಿಸಿದರೆ ಸಹೃದಯಿಯಾಗಿ ಸ್ವೀಕರಿಸುವದೂ ಗೊತ್ತಿರಬೇಕು. ನಮ್ಮದು ಪ್ರಜಾಪ್ರಭುತ್ವ ದೇಶ, ಸಾರ್ವಜನಿಕ ಜೀವನದಲ್ಲಿರುವವರನ್ನು ಸೂಕ್ತ ರೀತಿಯಲ್ಲಿ ವಿಮರ್ಷಿಸಲು ಎಲ್ಲರಿಗೂ ಹಕ್ಕಿದೆ. ಟೀಕಿಸಲು ಯೋಗ್ಯತೆ ಇಲ್ಲ ಎಂಬ ಅಹಂ ಇರಬಾರದು, ಇಲ್ಲದಿದ್ದರೆ ಅದೇ ಜನರ ಅವಕೃಪೆಗೆ ಪಾತ್ರರಾಗಿ ಮೂಲೆಗುಂಪಾಗಬೇಕಾದೀತು. ಇದಕ್ಕೆ ತೆಂಡುಲ್ಕರ್ ಸಹಾ ಹೊರತಲ್ಲ. ನಮ್ಮ ದೇಶದಲ್ಲಿ ಕ್ರಿಕೆಟ್ ಒಂದೇ ಆಟವಲ್ಲ. ಬೇರೆ ಹಲವು ಆಟಗಳಿವೆ. ಆದರೆ ನಾವು ಬ್ರಿಟಿಷ್ ಗುಲಾಮಗಿರಿಗೆ ಜೋತುಬಿದ್ದವರಂತೆ ಬರೀ ಕ್ರಿಕೆಟಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಅದರ ಮುಂದೆ ಬೇರೆಲ್ಲ ಆಟಗಳು ಮೂಲೆಗುಂಪಾಗಿವೆ. 200ಚಿಲ್ಲರೆ ದೇಶಗಳಲ್ಲಿ ಸುಮಾರು 20 ದೇಶಗಳಲ್ಲಿ ಮಾತ್ರ ಕ್ರಿಕೆಟ್ ಆಡಲ್ಪಡುತ್ತದೆ. ಅಲ್ಲೇ ಗೊತ್ತಾಗುತ್ತಲ್ಲ, ಅದರ ಬಂಡವಾಳ ಏನಂತ? ಅದೊಂದು ಅನುತ್ಪಾದಕ ಆಟ, ದೇಶಕ್ಕೆ ನಷ್ಟವೆಂದು ಉಳಿದ ದೇಶಗಳು ವಸ್ತುಶಃ ಕ್ರಿಕೆಟ್ ನ್ನು ಬಹಿಷ್ಕರಿಸಿವೆ. ನಮ್ಮ ದೇಶದಲ್ಲಿ ನಾವದನ್ನು ಆರಾಧಿಸುತ್ತಿದ್ದೇವೆ, ಕ್ರಿಕೆಟ್ ಆಟಗಾರರನ್ನು ಅಗತ್ಯಕ್ಕಿಂತ ಜಾಸ್ತಿ ತಲೆ ಮೇಲೆ ಕೂರಿಸಿಕೊಂಡಿದ್ದೇವೆ. ಇಂದು ಒಂದೆರಡು ಮ್ಯಾಚ್ ಆಡಿದ ಆಟಗಾರನ ಲೈಪ್ ಸೆಟ್ಲ್ ಆಗಿ ಕರೋಡ್ ಪತಿಯಾಗಿ ವಿಲಾಸಿ ಜೀವನ ನಡೆಸುತ್ತಾನೆ. ಎಲ್ಲಿವರೆಗಂದರೆ ನಮ್ಮ BCCI ಯು ICCಯನ್ನು ಬುಗುರಿಯಂತೆ ಆಡಿಸುವಷ್ಟರ ಮಟ್ಟಿಗೆ ಬೆಳೆದಿದೆ. ಈಗಂತೂ match fixing, betting ನಿಂದಾಗಿ ಕ್ರಿಕೆಟ್ ನ ಮಾನ ಮೂರು ಕಾಸಿಗೂ ಇಲ್ಲವೆಂಬಂತಾಗಿದೆ. ಆಟಗಾರರಿಗೆ ದೇಶದ ಹಿತಕ್ಕಿಂತ ಸ್ವಂತ ಹಿತ ಮುಖ್ಯವಾಗಿದೆ. ತಮ್ಮ ಆಟ ಹೆಂಡತಿಗೋ ಮತ್ಯಾರಿಗೋ ಅರ್ಪಣೆ ಎನ್ನುತ್ತಾರೆಯೇ ಹೊರತು ದೇಶಕ್ಕಾಗಿ ಎನ್ನುತ್ತಿಲ್ಲ. ಕ್ರಿಕೆಟಿಗರು ತಮ್ಮ ಕೋಟಿ ಕೋಟಿ ಸಂಪಾದನೆಯನ್ನು ಸಮಾಜದೊಂದಿಗೆ ಎಷ್ಟು ಹಂಚಿಕೊಂಡಿದ್ದಾರೆ? ಎಷ್ಟು ಶಾಲೆ,ಆಸ್ಪತ್ರೆ,ಅನಾಥಾಶ್ರಮಗಳನ್ನು ಕಟ್ಟಿದ್ದಾರೆ? ನಾವು ವಸ್ತುನಿಷ್ಠವಾಗಿ, ತರ್ಕಬದ್ಧವಾಗಿರಬೇಕೇ ಹೊರತು, ಯಾವ ವ್ಯಕ್ತಿಯ ಕುರುಡು ಆರಾಧಕ ರಾಗಬಾರದು.
Posted on: Fri, 15 Nov 2013 06:41:30 +0000

Trending Topics



Recently Viewed Topics




© 2015