ಸ್ವಗತ (ಸ್ವಲ್ಪ ಉದ್ದ ಇದೆ. - TopicsExpress



          

ಸ್ವಗತ (ಸ್ವಲ್ಪ ಉದ್ದ ಇದೆ. ತಾಳ್ಮೆ ಇರಲಿ) #ಆರಿಗಾರೂ_ಇಲ್ಲ (ಹೆತ್ತವರು-ಮಗ-ಮಕ್ಕಳು) #ಇದು_ತುತ್ತೂರಿ ನಾವು ಹಿಂದೆ ಕಗ್ಗದಾಸಪುರದಲ್ಲಿ ಒಂದು ಬಾಡಿಗೆ ಮನೆಯಲ್ಲಿದ್ದೆವು... ನಮ್ಮ ಪಕ್ಕದ 1 BHK ಮನೆಗೆ ಒಂದು ವೃದ್ಧ ಭಿಸೆ ದಂಪತಿ ಬಾಡಿಗೆಗೆ ಬಂದು ನೆಲೆಸಿದರು. ಭಿಸೆ ಅವರ surname - ಮರಾಠಿ. ಅನ್ಯೋನ್ಯ ದಾಂಪತ್ಯ. ಗಂಡ ಹೆಂಡತಿ ಇಬ್ಬರೂ well-educated. ಸುಮಾರು 80ರ ಆಸುಪಾಸಿನವರು. ಅವರಿಂದ ಅವರ ಬಗ್ಗೆ ನಮಗೆ ತಿಳಿದದ್ದು ಇಷ್ಟು. ಮಿಸ್ಟರ್. ಭಿಸೆ ಭಾರತ ಸರಕಾರದ ಉದ್ದಿಮೆಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದವರು, ಪುಣೆಯಲ್ಲಿ. ನಿವೃತ್ತಿ ಹೊಂದಿದ ಮೇಲೂ ಪುಣೆಯಲ್ಲೇ ಸ್ವಂತ ಮನೆಯಲ್ಲಿ ವಾಸವಾಗಿದ್ದವರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಹೆಣ್ಣು ಮಕ್ಕಳು ಮದುವೆಯಾಗಿ - ಮುಂಬೈಯಲ್ಲಿ. ಮಗ ಬೆಂಗಳೂರಿನಲ್ಲಿ ಸ್ವಂತ ಉದ್ಯೋಗ ಮಾಡಿಕೊಂಡು ಸಾಧಾರಣ ಮಟ್ಟಿಗೆ ಒಳ್ಳೆಯ ಹೆಸರು ಇದ್ದವರು. ಆ ಮಗನಿಗೆ ಇಬ್ಬರು ಹೆಣ್ಣುಮಕ್ಕಳು. ಹೆಂಡತಿಯ ಅಪ್ಪ ಕುಲೀನ ಮನೆತನದವರು - ತಮಿಳು ಜನ. ಅರವದ್ದೇ ಮನೆಯಲ್ಲಿ ಮನೆ ಅಳಿಯ ಆಗಿ ಇವರ ವಾಸ ಬೆಂಗಳೂರಿನ ಸಿ‌ವಿ ರಾಮನ್ ನಗರದಲ್ಲಿ. ಅಪ್ಪನಿಗೆ ವಯಸ್ಸು 80 ಸಮೀಪಿಸಿದಾಗ ಮಗನಿಗೆ ವ್ಯಾಪಾರಕ್ಕೆ ಹಣ ಬೇಕಿತ್ತು. ಅಪ್ಪನಲ್ಲಿ ವಿನಂತಿ. ಪುಣೆಯಲ್ಲಿದ್ದ ಮನೆ ಮಾರಿ ಬಂದು ನಮ್ಮ ಜೊತೆ ಇರಿ. ನಿಮಗೂ ವಯಸ್ಸಾಯ್ತು. ನನಗೆ ವ್ಯಾಪಾರಕ್ಕೆ ತುರ್ತು ಹಣ ಬೇಕಾಗಿದೆ ಹೆತ್ತ ಕರುಳು. ಹೂಂಗುಟ್ಟಿತು. ಮನೆ ಮಾರಿದ್ದೂ ಆಯ್ತು. ಮಗನ ಹೆಂಡತಿಯ ಅಪ್ಪನ ಮನೆಯಲ್ಲಿ ಬಂದು ನೆಲೆಸಿದ್ದೂ ಆಯ್ತು. ಮನೆ ಮಾರಿದ ಹಣ ಮಗಮಹಾರಾಯನಿಗೆ ಕೊಟ್ಟಿದ್ದೂ ಆಯ್ತು. ಒಂದು ವರ್ಷ ಆಗಿತ್ತು. ಮಗನ ಮಾವ ತನ್ನ ಜಾಗವನ್ನು ಒಬ್ಬ ಬಿಲ್ಡರ್ ಗೆ ಮೂರು flat ಗಳ free offer ಆಮಿಷಕ್ಕೆ ಮಾರಿ ನಮ್ಮ ಮನೆಯ ಪಕ್ಕ ಬಾಡಿಗೆ ಮನೆ ಹಿಡಿದರು. ಆ ಮೂರು ಫ್ಲಾಟ್ ಗಳಲ್ಲಿ ಎರಡು ಅವರಿಗೆ ಮತ್ತು ಒಂದು ಮಗಳಿಗೆ- ಅಂದರೆ ಭಿಸೆಯವರ ಸೊಸೆಗೆ. ಎಲ್ಲಾ 3 BHK. Posh Flats. ಆಗ ಮಗ ಅಪ್ಪನ ಹತ್ತಿರ ಈ ಬಾಡಿಗೆ ಮನೆಯಲ್ಲಿ ಜಾಗ ಇಲ್ಲ. ನಮ್ಮ ಮನೆಯ ಹತ್ತಿರವೇ ನೀವು ಇನ್ನೊಂದು ಬಾಡಿಗೆ ಮನೆ ಮಾಡಿ ಇರಿ. ಎಮರ್ಜೆನ್ಸೀಗೆ ನಾವು ಹತ್ತಿರ ಇರುತ್ತೇವೆ ಅಂದ. ಮುದಿಜೀವಗಳು, ಎಷ್ಟು ನೊಂದವೋ ಗೊತ್ತಿಲ್ಲ. ವಂಶೋದ್ಧಾರಕನೇ ನಯವಾಗಿ ಅಪ್ಪ ಅಮ್ಮನನ್ನು ಮನೆಯಿಂದ ಹೊರಗೆ ಹಾಕಿದ್ದ. ಅವರ ಹೆಣ್ಣುಮಕ್ಕುಳು ವಿಷಯಕ್ಕೆ ಆಮೇಲೆ ಬರುತ್ತೇನೆ.. ಸ್ವಲ್ಪ ಇಂಟರೆಸ್ಟಿಂಗ್. ಲಲಿತಾ ಮರಾಠಿ ಮಾತಾಡುತ್ತಾ ಬೆಳೆದದ್ದು. ಹಾಗೂ ಸ್ನೇಹಸ್ವಭಾವ. ಬರಬರುತ್ತಾ ನನ್ನ ಹೆಂಡತಿ ಲಲಿತಾಗೆ ಇವರು ತುಂಬಾ ಕ್ಲೋಸ್ ಆದ್ರು. ನಾನು ಸ್ವಲ್ಪ reserve. ಮರಾಠಿ ಮಾತಾಡುವಷ್ಟು ಬರುತ್ತದಾದರೂ ಇಂಗ್ಲೀಷ್ ನಲ್ಲಿ ವ್ಯವಹಾರ. ಆದ್ರೂ ಎಲ್ಲರೂ ಒಬ್ಬರಿಗೊಬ್ಬರು ಅಚ್ಚು-ಮೆಚ್ಚು. ನಮ್ಮ non-veg ಅಡುಗೆ ಅವರಿಗೆ ತುಂಬಾ ಇಷ್ಟ. ಲಲಿತಾ ಅವರಿಗೆ ಮಗಳೂ ಆಗಿದ್ದಳು. ಸೊಸೆಯೂ ಆಗಿದ್ದಳು. ಲಲ್ಲಿಯ (ನಮ್ಮ) ಗುಣಗಾನ ಮುಂಬೈಯಲ್ಲಿರುವ ಅವರ ಹೆಣ್ಣುಮಕ್ಕಳ ಮನೆಯಲ್ಲೆಲ್ಲಾ ಹಬ್ಬಿತ್ತು. ಅವರೂ ಬೆಂಗಳೂರಿಗೆ ಬಂದು ಹೋಗಿದ್ದರು... ನಮ್ಮ ಮಕ್ಕಳೊಂದಿಗೆ ಬೆಂಗಳೂರೆಲ್ಲಾ ಸುತ್ತಾಡಿ ಏನೇನೋ ಕೊಡಿಸಿ ಹೋಗಿದ್ದರು. ಒಂದು ವರ್ಷದಲ್ಲಿ ಇವರ ಫ್ಲಾಟ್ಸ್ ರೆಡೀ ಆದವು. ಮಗ ಅಲ್ಲಿರೋದು ಬರೇ ಮೂರು bedroomಗಳು. ಎರಡು ನನ್ನ ಮಕ್ಕಳಿಗೆ. ಒಂದು ನಮಗೆ. ನೀವು ಇದೇ ಬಾಡಿಗೆ ಮನೆಯಲ್ಲಿರಿ ಎಂದು ಟಾಟಾ ಬೈ ಬೈ ಎಂದು ಹೊಸ ಮನೆಗೆ ಹೊರಟು ಹೋಗೇಬಿಟ್ಟ ಮಾವನ ಹಿಂದೆ - ಹೆಂಡತಿ ಮಕ್ಕಳ ಜೊತೆಗೆ. (ಕೆಟ್ಟವರೇನಲ್ಲ). ಮುಂದಿನ ಎರಡು ವರ್ಷ ಅವರ ಸುಖ-ಕಷ್ಟಕ್ಕೆ ಲಲಿತಾನೇ ದಿಕ್ಕು. ನಾನು ಅಲ್ಪ-ಸ್ವಲ್ಪ. ಹೆಂಡತಿಗೆ (Mrs. ಭಿಸೆ) ಆಸ್ಟಿಯೊಪೋರಾಸಿಸ್ ಶುರು ಆಗಿ ಹಾಸಿಗೆ ಹಿಡಿದರು. ಆಮೇಲೆ ಅವರ ಹೆಣ್ಣುಮ್ಮಕ್ಕಳು ಅವರನ್ನು ಮುಂಬೈಗೆ ಕರೆಸಿಕೊಂಡರು. ನಮ್ಮನ್ನು ಮುಂಬೈಗೆ ಸುಮಾರು ಬಾರಿ ಆಮಂತ್ರಿಸಿದ್ದರೂ ಹೋಗಲಾಗಲಿಲ್ಲ. ಆಗಾಗ ನಮ್ಮ ಜೊತೆ ಫೋನ್ ಮುಖಾಂತರ ಸಂಪರ್ಕ ಇತ್ತು. ಒಂದೂವರೆ ವರ್ಷಗಳ ಮೇಲೆ Mrs. ಭಿಸೆ ನಿಧನ ಹೊಂದಿದ ವಿಷಯ ಅವರ ಮಗಳು ಫೋನ್ ಮಾಡಿ ತಿಳಿಸಿದರು. Out of sight is out of mind ಅನ್ನೋ ಥರ ನಿಧಾನವಾಗಿ ಸಂಪರ್ಕ ಕಡಿಯಿತು, ಅಂದ ಹಾಗೆ ಭಿಸೆ ದಂಪತಿಯ ಮಗಳ ನಾದಿನಿ ಹಿಂದಿ ನಟ ಸಲ್ಮಾನ್ ಖಾನ್ ನ ಮಲತಾಯಿ (stepmother) !!! ಇಂದಿಗೂ ಮುಂಬೈಗೆ ಹೋದರೆ ಸಲ್ಮಾನ್ ಖಾನ್ ನನ್ನು ಭೇಟಿ ಮಾಡಿ ಬರುವುದು ಕಷ್ಟವೇನಲ್ಲ,,,
Posted on: Tue, 15 Jul 2014 16:09:04 +0000

Trending Topics



Recently Viewed Topics




© 2015