ಏರ್ ಇಂಡಿಯಾ ಎಕ್ಷಪ್ರೆಸ್ - TopicsExpress



          

ಏರ್ ಇಂಡಿಯಾ ಎಕ್ಷಪ್ರೆಸ್ ಗೆ ಹೇಳೋರು ಕೇಳೋರು ಯಾರು ಇಲ್ವೆ ? ಸೇಮ್ ಮಿಸ್ಟೇಕ್ ಎಷ್ಟು ಸಲ ರಿಪೀಟ್ ಮಾಡ್ತಾರೆ ಮಾರ್ರೆ.. ಯಾವಾಗ ನೋಡಿದರು ಫುಲ್ ಇರೋ ಎಕ್ಷಪ್ರೆಸ್ ನ ತೊಂದರೆಗಳು ಯಾಕೆ ಇನ್ನು ಕಮ್ಮಿಯಾಗಿಲ್ಲ .ಲೋ ಕ್ಲಾಸ್ ಸ್ನಾಕ್ಕ್ಸ್. ವಿಳಂಬಿತ ಪ್ಲೈಟು, ಕೇರ್ ಲೆಸ್ ವ್ಯವಸ್ಥೆ ಯಾಕೆ ಹೀಗೆ ? ಆರು ವರ್ಷಗಳ ಹಿಂದೆ ಮಸ್ಕಟ್ ಗೆ ಹೊರಟಿದ್ದ ನಾನು ಒಂದು ಬರಾತ್ ರಾತ್ರಿ ಏಳು ಗಂಟೆಗೆ ಹೊರಡಬೇಕಾದ ಪ್ಲೈಟು ಸಮಯ ಮುಂದೂಡಿ ಮುಂದೂಡಿ ಮರುದಿನ ಬೆಳಿಗ್ಗೆ ಆರು ಗಂಟೆಗೆ ಹೊರಟಾಗ ಅರ್ದ ಜೀವ ಹಾರಿ ಹೋಗಿತ್ತು . ಆ ರಾತ್ರಿ ಸೊಳ್ಳೆಗಳಿಂದ ಚುಚ್ಚಿಸಿಕೊಂಡು ನನ್ನ ಸಂಭಂದಿಗಳ ಜೊತೆಗೆ ಹೊರಗೆ ಕೂತು ನಾಯಿ ತರ ಕಾದ ಆ ದಿನ ಮರೆಯಲಾಗ್ತಿಲ್ಲ. ಗಲ್ಫ್ ಗೆ ಹೋಗುವ , ಗಲ್ಫ್ ನಿಂದ ಬರುವ ಮಂಗಳೂರಿಗರು ನೇರವಾಗಿ ಬೇಗ ಊರು ತಲುಪಲಿ ಎಂದು ಎಕ್ಷಪ್ರೆಸ್ ಆಯ್ಕೆ ಮಾಡುತ್ತಾರೆ ಹೊರತು ಎಕ್ಷಪ್ರೆಸ್ ಗೆ ಹರಕೆ ಹೊತ್ತು ಟಿಕೆಟ್ ಬುಕ್ ಮಾಡುದಿಲ್ಲ ಎನ್ನುವುದನ್ನು ಮ್ಯಾನೇಜ್ಮೆಂಟ್ ಬೇಗ ಅರ್ಥ ಮಾಡಿಕೊಂಡರೆ ಒಳಿತು # ಫಾರೂಖ್ ಕುಕ್ಕಾಜೆ . ibtimes.co.in/air-indias-dammam-mangalore-flight-gets-delayed-by-two-days-611875
Posted on: Tue, 21 Oct 2014 07:57:38 +0000

Recently Viewed Topics




© 2015